

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಐತಿಹಾಸಿಕ ಹಿನ್ನೆಲೆಯ ಚಾರ ಮೇಲ್ಬೇಟ್ಟು ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರಡಿಯ ಬ್ರಹ್ಮಕಲಶೋತ್ಸವ ಬಳಿಕ ನಡೆಯುವ ವಾರ್ಷಿಕ ನೇಮ ಮಂಗಳವಾರ ನಡೆಯಿತು. ಕಂಬದ ಮುಹೂರ್ತ, ಅಗೆಲು ಸೇವೆ, ಅನ್ನಸಂತರ್ಪಣೆ, ಬೈದರ್ಕಳ ಸರ್ಸಲೆ ಹೊರಡುವುದು, ಶಿವರಾಯ ಕೋಲ, ಬೈದರ್ಕಳ ದರ್ಶನ, ಬೈದರ್ಕಳ ಮತ್ತು ಧೂಮಾವತಿಯ ಮುಖಾಮುಖಿ ಭೇಟಿ ನಡೆಯಿತು.
ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಗೌರವಾಧ್ಯಕ್ಷ ಬಿ.ಹರ್ಷ ಶೆಟ್ಟಿ ಹುತ್ತುರ್ಕೆ, ಗರಡಿ ಆನುವಂಶಿಕ ಆಡಳಿತ ಮೊಕ್ತೇಸರ ಸುರೇಶ ಹೆಗ್ಡೆ ತಾರಾಳಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ವಾದಿರಾಜ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಮಿಥುನ್ ಶೆಟ್ಟಿ ಚಾರ, ಪುರೋಹಿತ್ ಸುಬ್ರಹ್ಮಣ್ಯ ಹೇರಳೆ, ಗರಡಿ ಪೂಜಾರಿ ವರ್ಗದವರಾದ ಲಕ್ಷ್ಮಣ ಪೂಜಾರಿ, ಸುಧಾಕರ ಪೂಜಾರಿ, ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಆನುವಂಶಿಕ ಒಂಬತ್ತು ಮನೆಯವರು, ವಾರ್ಡ್ ಸಮಿತಿ ಮುಖ್ಯಸ್ಥರು, ಸದಸ್ಯರು ಉಪಸ್ಥಿತರಿದ್ದರು.