

ಕಿನ್ನಿಗೋಳಿ: ಕಿಲೆಂಜೂರು ಶ್ರೀ ಸರಳಧೂಮಾವತಿ ದೈವಸ್ಥಾನದ ಶ್ರೀ ಬಂಟ ಧೂಮಾವತಿ ದೈವಗಳ ವಾರ್ಷಿಕ ನೇಮ ಡಿ.11ರಂದು ರಾತ್ರಿ ನಡೆಯಲಿದೆ. 10ರಂದು ಬೆಳಗ್ಗೆ 10.30ಕ್ಕೆ ಪುಣ್ಯಾಹ, ಶುದ್ಧಿಕಲಶ, ರಾತ್ರಿ 7.30ಕ್ಕೆ ಭಂಡಾರ ಸಾನದಿಂದ ಗರ್ಭಗುಡಿಗೆ ಶ್ರೀ ದೈವಗಳ ಭಂಡಾರ ಆಗಮನ, 8.15ಕ್ಕೆ ಶ್ರೀ ದೈವಗಳಿಗೆ ಚೌತಿ ಹಬ್ಬ, 11ರಂದು ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಗರ್ಭಗುಡಿಯಿಂದ ಕೊಡಿಯಡಿಗೆ ಭಂಡಾರ ಆಗಮನ, ರಾತ್ರಿ 10ರಿಂದ ನೇಮ ನಡೆಯಲಿದೆ ಎಂದು ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಶ್ವನಾಥ ಕೆ.ಶೆಟ್ಟಿ ಕುಡ್ತಿಮಾರುಗುತ್ತು ತಿಳಿಸಿದ್ದಾರೆ.