ಅರೆಬರೆ ಕಾಮಗಾರಿಯಿಂದ ಕಿರಿಕಿರಿ

oplus_34
oplus_34
Published on

ಧಾರವಾಡ: ನಗರದ ನವಲೂರಿನ ಮಣಿಕಂಠನಗರದಲ್ಲಿ ನೂತನ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸುಮಾರು 200 ಮೀಟರ್ ಉದ್ದದ ರಸ್ತೆಯಲ್ಲಿ ಪೇವರ್ಸ್ ಅಳವಡಿಸಲಾಗುತ್ತಿದೆ. ಅದನ್ನು ಪೂರ್ಣಗೊಳಿಸದೆ ಸುಮಾರು 20 ಮೀಟರ್ ರಸ್ತೆಗೆ ಪೇವರ್ಸ್ ಅಳವಡಿಸಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ನಡೆದಾಡಲು ಹಾಗೂ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಏಕೆಂದರೆ ಬಾಕಿ ಇರುವ ರಸ್ತೆ ಎರೆ ಮಣ್ಣಿನದ್ದಾಗಿದೆ. ಸಂಬ0ಧಪಟ್ಟವರು ಇತ್ತ ಗಮನ ಹರಿಸಿ ಬಾಕಿ ಕೆಲಸವನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಇಲ್ಲಿನ ನಿವಾಸಿ, ಸಿಆರ್‌ಪಿಎಫ್ ನಿವೃತ್ತ ಯೋಧ ರವಿ ತಾಂಬಡೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net