ಕುಂದಗೋಳ ತಾಲೂಕಿನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ

DC
Published on

ಕುಂದಗೋಳ: ತಾಲೂಕಿನ 27 ಗ್ರಾಮ ಪಂಚಾಯಿತಿಗಳ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಗುರುವಾರ ಪ್ರಕಟಿಸಿದರು.

ಗ್ರಾಮ ಪಂಚಾಯಿತಿವಾರು ಅಧ್ಯಕ್ಷ, ಉಪಾಧ್ಯಕ್ಷ ವಿವರ: ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷ-ಪ್ರ.ವರ್ಗ-1, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಹರ್ಲಾಪುರ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಗೌಡಗೇರಿ ಅಧ್ಯಕ್ಷ-ಪ್ರ.ವರ್ಗ-1, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಗುಡಗೇರಿ ಅಧ್ಯಕ್ಷ-ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ-ಪ್ರ.ವರ್ಗ-2 ಮಹಿಳೆ. ಸಂಶಿ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ. ಹಿರೇನೇರ್ತಿ ಅಧ್ಯಕ್ಷ- ಪ್ರ.ವರ್ಗ-1, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ.

ಚಾಕಲಬ್ಬಿ ಅಧ್ಯಕ್ಷ-ಪ್ರ.ವರ್ಗ-1ಮಹಿಳೆ, ಉಪಾಧ್ಯಕ್ಷ-ಪ.ಜಾತಿ. ಗುಡೆನಕಟ್ಟಿ ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ್ರ.ವರ್ಗ-1. ಯರಿಬೂದಿಹಾಳ ಅಧ್ಯಕ್ಷ- ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ-ಪ್ರ.ವರ್ಗ-2. ಹಿರೇಗುಂಜಾಳ ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ. ಯರಗುಪ್ಪಿ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ-ಪ್ರ.ವರ್ಗ-1 ಮಹಿಳೆ. ರೊಟ್ಟಿಗವಾಡ ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.

ಕಮಡೊಳ್ಳಿ ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪ್ರ.ವರ್ಗ-1. ಶಿರೂರು ಅಧ್ಯಕ್ಷ- ಪ್ರ.ವರ್ಗ-1 ಮಹಿಳೆ, ಉಪಾಧ್ಯಕ್ಷ- ಪ.ಪಂಗಡ. ದೇವನೂರು ಅಧ್ಯಕ್ಷ- ಪ.ಜಾತಿ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಬೆಟದೂರ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಯಲಿವಾಳ ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ರಾಮನಕೊಪ್ಪ ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಹಿರೇಹರಕುಣಿ ಅಧ್ಯಕ್ಷ- ಪ.ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಬು.ತರ್ಲಗಟ್ಟ ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.

ಕುಬಿಹಾಳ ಅಧ್ಯಕ್ಷ- ಪ್ರ.ವರ್ಗ-2 ಮಹಿಳೆ, ಉಪಾಧ್ಯಕ್ಷ- ಪ್ರ.ವರ್ಗ-1 ಮಹಿಳೆ. ಇಂಗಳಗಿ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪ್ರ.ವರ್ಗ-1 ಮಹಿಳೆ. ಮತ್ತಿಗಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ- ಪ್ರ.ವರ್ಗ-2, ಉಪಾಧ್ಯಕ್ಷ- ಪ.ಪಂಗಡ ಮಹಿಳೆ. ಮಳಲಿ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪ್ರ.ವರ್ಗ-1 ಮಹಿಳೆ. ಗುರುವಿನಹಳ್ಳಿ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪ.ಜಾತಿ ಮಹಿಳೆ.

ಪಶುಪತಿಹಾಳ ಅಧ್ಯಕ್ಷ- ಪ.ಪಂಗಡ, ಉಪಾಧ್ಯಕ್ಷ- ಸಾಮಾನ್ಯ. ಭರದ್ವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ- ಪ.ಪಂಗಡ ಮಹಿಳೆ, ಉಪಾಧ್ಯಕ್ಷ- ಪ.ವರ್ಗ-1 ಮೀಸಲಾತಿಯನ್ನು ನಿಗದಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಉಪ ವಿಭಾಗಧಿಕಾರಿ ಅಶೋಕ ತೆಲಿ, ತಹಸೀಲ್ದಾರ್ ಶೈಲೇಶ ಪರಮಾನಂದ ಇದ್ದರು.

ಮೀಸಲಾತಿ ಪ್ರಶ್ನಿಸಿದ ಗುಡಗೇರಿ ಗ್ರಾಪಂ ಸದಸ್ಯರು

ಸಭೆ ಮುಗಿದ ನಂತರ ತೆರಳುತ್ತಿದ್ದ ಜಿಲ್ಲಾಧಿಕಾರಿಯನ್ನು ಯಲಿವಾಳ ಹಾಗೂ ಗುಡಗೇರಿ ಗ್ರಾಪಂ ಸದಸ್ಯರು ತಮ್ಮ ಗ್ರಾಪಂಗೆ ಪ್ರಕಟಿಸಿದ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಮೊದಲನೇ ಅವಧಿಯು ಮಹಿಳೆಯರಿಗೆ ಮೀಸಲಾಗಿದ್ದು, ಈಗ ಎರಡನೇ ಅವಧಿಯು ಮಹಿಳಾ ಮೀಸಲಾತಿ ಘೋಷಿಸಿದ್ದಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿ ಮೀಸಲಾತಿ ಪ್ರಕಟಣೆ ನಮ್ಮ ಕೈಯಲ್ಲಿರುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net