ಹಾನಗಲ್ಲ ತಾಲೂಕಿನ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು ಪ್ರಕಟ

Hanagal GP Misalati
Published on

ಹಾನಗಲ್ಲ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಪಂ ಸದಸ್ಯರ ಸಭೆಯಲ್ಲಿ ತಾಲೂಕಿನ 42 ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಜಿಲ್ಲಾಧಿಕಾರಿ ರಘುನಂದನಮೂರ್ತಿ ನೇತೃತ್ವದಲ್ಲಿ ಮೀಸಲಾತಿ ನಿಗದಿಪಡಿಸಲಾಯಿತು. ಕೆಲ ಗ್ರಾಪಂಗಳ ಮೀಸಲಾತಿಯನ್ನು ಡ್ರಾ ಮೂಲಕ ಆಯ್ಕೆ ಮಾಡಲಾಯಿತು.

ವಿವರ ಹೀಗಿದೆ:

ಕಂಚಿನೆಗಳೂರು ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಅ ವರ್ಗ ಮಹಿಳೆ, ನರೇಗಲ್ ಅಧ್ಯಕ್ಷ ಅ ವರ್ಗ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಮಾರನಬೀಡ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ-ಅ ವರ್ಗ ಮಹಿಳೆ, ಶೀಗಿಹಳ್ಳಿ ಶಿಂಗಾಪುರ ಅಧ್ಯಕ್ಷ- ಅ ವರ್ಗ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, ಕರಗುದರಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಬೊಮ್ಮನಹಳ್ಳಿ ಅಧ್ಯಕ್ಷ-ಅ ವರ್ಗ ಮಹಿಳೆ, ಉಪಾಧ್ಯಕ್ಷ-ಬ ವರ್ಗ, ಯಳವಟ್ಟಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಅ ವರ್ಗ ಮಹಿಳೆ, ಬೆಳಗಾಲಪೇಟೆ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಅ ವರ್ಗ ಮಹಿಳೆ, ಮಾಸನಕಟ್ಟಿ ಅಧ್ಯಕ್ಷ-ಅ ವರ್ಗ, ಉಪಾಧ್ಯಕ್ಷ-ಎಸ್.ಸಿ. ಮಹಿಳೆ, ಹುಲ್ಲತ್ತಿ ಅಧ್ಯಕ್ಷ-ಅ ವರ್ಗ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಅಕ್ಕಿಆಲೂರು ಅಧ್ಯಕ್ಷ-ಅ ವರ್ಗ, ಉಪಾಧ್ಯಕ್ಷ-ಎಸ್​ಟಿ ಮಹಿಳೆ, ಬಾಳಂಬೀಡ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಆಡೂರು ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಎಸ್.ಸಿ. ಮಹಿಳೆ, ಅಲ್ಲಾಪುರ ಅಧ್ಯಕ್ಷ-ಎಸ್​ಟಿ ಮಹಿಳೆ, ಉಪಾಧ್ಯಕ್ಷ-ಅ ವರ್ಗ, ಕೂಸನೂರ ಅಧ್ಯಕ್ಷ-ಎಸ್.ಸಿ., ಉಪಾಧ್ಯಕ್ಷ-ಸಾಮಾನ್ಯ, ಕೆಲವರಕೊಪ್ಪ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಉಪ್ಪುಣಸಿ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ತಿಳವಳ್ಳಿ ಅಧ್ಯಕ್ಷ-ಅ ವರ್ಗ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಕಿರವಾಡಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಎಸ್.ಸಿ, ಹೊಂಕಣ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಹಿರೇಹುಲ್ಲಾಳ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಹೇರೂರ ಅಧ್ಯಕ್ಷ-ಬ ವರ್ಗ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಶ್ಯಾಡಗುಪ್ಪಿ ಅಧ್ಯಕ್ಷ-ಎಸ್.ಸಿ. ಮಹಿಳೆ, ಉಪಾಧ್ಯಕ್ಷ-ಅ ವರ್ಗ, ಚಿಕ್ಕಾಂಶಿಹೊಸೂರ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಎಸ್.ಸಿ. ಮಹಿಳೆ, ಶಿರಗೋಡ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಅ ವರ್ಗ, ಅರಳೇಶ್ವರ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಸುರಳೇಶ್ವರ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ, ಹಿರೂರ ಅಧ್ಯಕ್ಷ-ಎಸ್.ಟಿ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಮಂತಗಿ ಅಧ್ಯಕ್ಷ-ಎಸ್.ಸಿ. ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಕೊಪ್ಪರಸಿಕೊಪ್ಪ ಅಧ್ಯಕ್ಷ-ಎಸ್​ಸಿ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, ಹಿರೇಕಣಗಿ ಅಧ್ಯಕ್ಷ-ಎಸ್.ಸಿ. ಮಹಿಳೆ, ಉಪಾಧ್ಯಕ್ಷ-ಅ ವರ್ಗ, ಗೊಂದಿ ಅಧ್ಯಕ್ಷ-ಅ ವರ್ಗ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಸೋಮಸಾಗರ ಅಧ್ಯಕ್ಷ-ಎಸ್.ಟಿ. ಮಹಿಳೆ, ಉಪಾಧ್ಯಕ್ಷ-ಬ ವರ್ಗ ಮಹಿಳೆ, ಮಲಗುಂದ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಅ ವರ್ಗ ಮಹಿಳೆ, ಸಮ್ಮಸಗಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಎಸ್.ಸಿ, ಗೆಜ್ಜಿಹಳ್ಳಿ ಅಧ್ಯಕ್ಷ-ಎಸ್.ಸಿ, ಉಪಾಧ್ಯಕ್ಷ-ಸಾಮಾನ್ಯ, ಬೈಚವಳ್ಳಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಹಾವಣಗಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಸಾಂವಸಗಿ ಅಧ್ಯಕ್ಷ-ಸಾಮಾನ್ಯ ಮಹಿಳೆ, ಅ ವರ್ಗ, ಕೂಡಲ ಅಧ್ಯಕ್ಷ-ಅ ವರ್ಗ, ಉಪಾಧ್ಯಕ್ಷ-ಎಸ್.ಟಿ. ಮಹಿಳೆ, ಆಲದಕಟ್ಟಿ ಅಧ್ಯಕ್ಷ-ಅ ವರ್ಗ ಮಹಿಳೆ, ಉಪಾಧ್ಯಕ್ಷ-ಎಸ್.ಸಿ, ಡೊಳ್ಳೇಶ್ವರ ಅಧ್ಯಕ್ಷ-ಅ ವರ್ಗ, ಉಪಾಧ್ಯಕ್ಷ-ಎಸ್​ಟಿ ಮೀಸಲು ಘೊಷಿಸಲಾಗಿದೆ.

ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಸವಣೂರ ಎಸಿ ರಾಯಪ್ಪ ಹುಣಸಗಿ, ಚುನಾವಣೆ ತಹಸೀಲ್ದಾರ್ ನಾಗರಾಜ್, ಹಾನಗಲ್ಲ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಸಿ.ಎಸ್. ಜಾಧವ, ಗ್ರೇಡ್-2 ತಹಸೀಲ್ದಾರ್ ರವಿ ಕೊರವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net