ಗ್ರಾಪಂ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆ

IMG20241019132628.jpg
Published on

ಬೆಳಗಾವಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 41 ಗ್ರಾಮ ಪಂಚಾಯತಿಯ 43 ಸದಸ್ಯ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 23ರಂದು ಮತದಾನ ನಡೆಯಲಿದೆ.

ರಾಜ್ಯ ಚುನಾವಣೆ ಆಯೋಗವು ಶುಕ್ರವಾರ ಗ್ರಾಪಂ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಘೋಷಿಸಿದ್ದು, ನವೆಂಬರ್ 6ರಿಂದ ಚುನಾವಣೆ ನೀತಿ ಸಂಹಿತೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಜಾರಿಯಾಗಲಿದೆ. ನ.11ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನ.23ರಂದು ಮತದಾನ ನಡೆಯಲಿದೆ. ನ.26ರಂದು ಮತ ಎಣಿಕೆ ನಡೆಯಲಿದೆ.

ಯಾವ ಗ್ರಾಪಂಗೆ ಚುನಾವಣೆ?:

ಬೆಳಗಾವಿ ತಾಲೂಕಿನ ಮರಿಹಾಳ, ಬಸ್ತವಾಡ, ಬೆಕ್ಕಿನಕೇರಿ, ಬೆನಕನಹಳ್ಳಿ, ಸಂತಿಬಸ್ತವಾಡ, ಕಂಗ್ರಾಳಿ ಕೆ.ಎಚ್., ಹುಕ್ಕೇರಿ ತಾಲೂಕಿನ ಮಾವನೂರ, ಘೋಡಗೇರಿ, ಶಿರಢಾಣ, ಗುಡಸ, ಚಿಕ್ಕೋಡಿ ತಾಲೂಕಿನ ಕೇರೂರ, ಚಂದೂರ, ಕರೋಶಿ, ನಾಯಿಂಗ್ಲಜ್, ರಾಯಬಾಗ ತಾಲೂಕಿನ ನಿಡಗುಂದಿ, ಕಾಗವಾಡ ತಾಲೂಕಿನ ಮಂಗಸೂಳಿ, ಮೊಳೆ, ಅಥಣಿ ತಾಲೂಕಿನ ಶಿರೂರ, ಶಿರಹಟ್ಟಿ, ಅರಟಾಳ, ಬೈಲಹೊಂಗಲ ತಾಲೂಕಿನ ಉಡಕೇರಿ, ಹಣ್ಣೀಕೇರಿ, ವಣ್ಣೂರ, ಗೋವನಕೊಪ್ಪ, ಮರಕಟ್ಟಿ, ಸವದತ್ತಿ ತಾಲೂಕಿನ ಹಿರೇಕುಂಬಿ, ರಾಮದುರ್ಗ ತಾಲೂಕಿನ ಹಿರೇಕೊಪ್ಪ ಕೆ.ಎಸ್., ಕದಾಂಪೂರ, ಘಟಕನೂರ, ಉದಪುಡಿ, ಗೊಡಚಿ, ಮೂಡಲಗಿ ತಾಲೂಕಿನ ಮುನ್ಯಾಳ, ಯಾದವಾಡ, ನಿಪ್ಪಾಣಿ ತಾಲೂಕಿನ ಯಮಗರ್ಣಿ, ಕೋಗನೊಳ್ಳಿ, ಖಾನಾಪುರ ತಾಲೂಕಿನ ಗುಂಜಿ, ಬಿಡಿ, ಜಾಂಬೋಟಿ, ಹಲಶಿ, ಹಿರೇಮುನವಳ್ಳಿ ಹಾಗೂ ಘೋಟಗಾಳಿ ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net