ವರದಾ-ಬೇಡ್ತಿ ನದಿ ಜೋಡಣೆ ಬಜೆಟ್‌ನಲ್ಲಿ ಘೋಷಿಸಿ

Announce the interlinking of Varada-Bedti rivers in the budget
Published on

ಹಾನಗಲ್ಲ: ವರದಾ-ಬೇಡ್ತಿ ನದಿಗಳ ಜೋಡಣೆ ಕುರಿತು ವಿಧಾನಸಭೆ ಅಽವೇಶನದಲ್ಲಿ ವಿಷಯ ಪ್ರಸ್ತಾಪಿಸಿ, ಯೋಜನೆಯನ್ನು ಬಜೆಟ್‌ನಲ್ಲಿ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಕಾರಿಗಳು ಪಟ್ಟಣದಲ್ಲಿನ ಶಾಸಕ ಶ್ರೀನಿವಾಸ ಮಾನೆ ಅವರ ಕಚೇರಿ ಎದುರು ಗುರುವಾರ ಧರಣಿ ನಡೆಸಿ, ಮನವಿ ಸಲ್ಲಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ನದಿ ಜೋಡಣೆಗೆ ಒತ್ತಾಯಿಸಿ ಜಿಲ್ಲೆಯ ಎಲ್ಲ ಶಾಸಕರ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ. ಅನ್ನದಾತರು ನೀರಿಗಾಗಿ ಗೋಳಾಡುವಂತಾಗಿದೆ. ಸರ್ಕಾರ ನೀರಾವರಿ ಯೋಜನೆಗಳನ್ನು ಕೈಗೊಳ್ಳುವ ಅವಕಾಶವಿದ್ದಾಗ್ಯೂ ನಿರ್ಲಕ್ಷ÷್ಯ ವಹಿಸಬಾರದು. ರೈತರು ಕೃಷಿಯಿಂದ ವಿಮುಖರಾಗುವ ಮುನ್ನ ಜಲಮೂಲಗಳನ್ನು ಬಳಸಿಕೊಂಡು ನೀರಾವರಿಗೆ ಮೊದಲ ಆದ್ಯತೆಯಲ್ಲಿ ಅನುದಾನ ನೀಡಬೇಕು. ಜಿಲ್ಲೆಯ ಎಲ್ಲ ಶಾಸಕರೂ ಇದರಲ್ಲಿ ತಮ್ಮ ಇಚ್ಛಾಶಕ್ತಿ ತೋರಬೇಕು ಎಂದು ಆಗ್ರಹಿಸಿದರು.

ವರದಾ-ಬೇಡ್ತಿ ನದಿ ಜೋಡಣೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ೨ ದಶಕಗಳಿಂದಲೂ ಹೋರಾಟ ನಡೆದಿದೆ. ಈ ಯೋಜನೆ ರೈತರಿಗೆ, ಕೃಷಿಗೆ ಅನುಕೂಲವಾಗಲಿದೆ. ವರದಾ-ಬೇಡ್ತಿ ನದಿ ಅಖಂಡ ಧಾರವಾಡ ಜಿಲ್ಲೆಯಲ್ಲಿ ಹುಟ್ಟಿ, ಉತ್ತರ ಕನ್ನಡ ಪ್ರವೇಶಿಸಿ, ಯಲ್ಲಾಪುರ, ಶಿರಸಿಯ ಉಪನದಿಗಳನ್ನು ಕೂಡಿಕೊಂಡು, ಅಂಕೋಲಾ ತಾಲೂಕಿನ ಮೂಲಕ ಗಂಗಾವಳಿ ನದಿಯಾಗಿ, ಅರಬ್ಬಿ ಸಮುದ್ರ ಸೇರುವ ನೀರನ್ನು, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಕೃಷಿ ಭೂಮಿಗೆ ನೀರಾವರಿ ಒದಗಿಸುತ್ತದೆ. ಕೇಂದ್ರ ಸರ್ಕಾರದ ಜಲನೀತಿ ಯೋಜನೆಯಲ್ಲಿ ವರದಾ-ಬೇಡ್ತಿ ನದಿ ಜೋಡಣೆ ೧೪ನೇ ಸ್ಥಾನದಲ್ಲಿದೆ. ರಾಜ್ಯ ಸರ್ಕಾರ ೨೦೧೧ರಲ್ಲಿ ಮುಂಗಡಪತ್ರದಲ್ಲಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿತ್ತು ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ವರದಾ-ಬೇಡ್ತಿ ನದಿಗಳ ಜೋಡಣೆಯಿಂದ ನೂರಾರು ಟಿಎಂಸಿ ನೀರು ೬ ಜಿಲ್ಲೆಗಳ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಿಸಲಿದೆ. ಹಾವೇರಿ ಜಿಲ್ಲೆ ಸಂಪೂರ್ಣ ನೀರಾವರಿಯಾಗಲಿದ್ದು, ಒಟ್ಟು ೧೬ ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಲಿದೆ. ಎಲ್ಲ ಗ್ರಾಮ, ಪಟ್ಟಣಗಳಿಗೆ ಕುಡಿಯುವ ನೀರು ವಿತರಣೆ ಸಾಧ್ಯವಾಗುತ್ತದೆ. ಅಂತರ್ಜಲವೂ ವೃದ್ಧಿಯಾಗುತ್ತದೆ. ಇದಕ್ಕಾಗಿ ಎಲ್ಲರೂ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ವಿಧಾನಸಭೆ ಅಽವೇಶನದಲ್ಲಿ ಅಗತ್ಯ ಕ್ರಮಕ್ಕೆ ಒತ್ತಾಯಿಸಬೇಕು. ಇದಕ್ಕೆ ಶಾಸಕರು, ಸರ್ಕಾರ ಸರಿಯಾಗಿ ಸ್ಪಂದಿಸದಿದ್ದಲ್ಲಿ ಪ್ರತಿ ಗ್ರಾಮದಲ್ಲೂ ಬೇರೆ-ಬೇರೆ ಆಯಾಮಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.

ವಕೀಲ ಎಸ್.ಎಂ. ಕೋತಂಬರಿ, ರೈತ ಸಂಘದ ಪದಾಽಕಾರಿಗಳಾದ ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ ಮಾತನಾಡಿದರು. ಶ್ರೀಧರ ಮಲಗುಂದ, ಮಹಲಿಂಗಪ್ಪ ಅಕ್ಕಿವಳ್ಳಿ, ಸೋಮಣ್ಣ ಜಡೆಗೊಂಡರ, ವಾಸುದೇವ ಕಮಾಟಿ, ಷಣ್ಮುಖ ಅಂದಲಗಿ, ಶಂಕರಗೌಡ ಪಾಟೀಲ, ಪರಸಪ್ಪ ಮಡಿವಾಳರ, ಮಂಜು ತಲಗಡ್ಡಿ, ಅನಿಲ ಚಿಕ್ಕಾಂಶಿ, ಚನ್ನಬಸವ ಯತ್ನಳ್ಳಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net