ಶ್ರೀ ತುಳಸಿ ಮಾರಿಯಮ್ಮ ದೇಗುಲದ ವಾರ್ಷಿಕೋತ್ಸವ

1 vpt 3.1
ವಿರಾಜಪೇಟೆಯ ಮುಖ್ಯ ಬೀದಿಗಳಲ್ಲಿ ತುಳಸಿ ಮಾರಿಯಮ್ಮ ದೇವಿಯ ಕರಗ ಮಹೋತ್ಸವ.
Published on

ವಿರಾಜಪೇಟೆ: ಇಲ್ಲಿನ ಸುಣ್ಣದ ಬೀದಿಯ ಶ್ರೀ ತುಳಸಿ ಮಾರಿಯಮ್ಮ ದೇವಾಲಯದ ವಾರ್ಷಿಕ ಉತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು.

ಕಾವೇರಿ ನದಿಯಲ್ಲಿ ಶ್ರೀ ತುಳಸಿ ಮಾರಿಯಮ್ಮ ದೇವಿಯ ಕರಗ ಆರಾಧನೆ ಮತ್ತು ಮಹಾಪೂಜೆ, ಅನ್ನಸಂತರ್ಪಣೆ ನಡೆಸಲಾಯಿತು. ರಾತ್ರಿ ಮಾರಿಯಮ್ಮ ದೇವಸ್ಥಾನದಿಂದ ವಿದ್ಯುತ್ ಅಲಂಕಾರ ಮಂಟಪದೊಂದಿಗೆ ತುಳಸಿ ಮಾರಿಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪಳನಿ ಪ್ರಕಾಶ್, ಮುಖ್ಯ ಅರ್ಚಕ ಪ್ರತಾಪ್, ಮಣಿ, ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net