ತುಳಜಾಭವಾನಿ ದೇವಸ್ಥಾನದ ವಾರ್ಷಿಕೋತ್ಸವ

New Tulajabhavani new
Published on

ಹುಬ್ಬಳ್ಳಿ: ನವನಗರದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಗಂಗಾಧರ ನಗರ ಬಡಾವಣೆೆಯಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದ 7ನೇ ವಾರ್ಷಿಕೋತ್ಸವ ಜೂ. 19 ಹಾಗೂ 20ರಂದು ನಡೆಯಲಿದೆ.

19ರಂದು ಬೆಳಗ್ಗೆ 7ಗಂಟೆಯಿಂದ ಶ್ರೀ ತುಳಜಾ ಭವಾನಿ ದೇವಿಯ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, 9ಕ್ಕೆ ಗಣ ಹೋಮ, ನವಗ್ರಹ ಹೋಮ, 11.45ಕ್ಕೆ ಪೂರ್ಣಾಹುತಿ ಹಾಗೂ ದೇವಿಯ ಮಹಾಮಂಗಳಾರತಿ ನಂತರ ಸುಹಾಸಿನಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪ್ರಸಾದ ವಿತರಣೆ ಜರುಗಲಿದೆ.

ಸಂಜೆ 4ರಿಂದ 5ಗಂಟೆಯವರೆಗೆ ಆರಾಧನಾ ಮಹಿಳಾ ವೃಂದದ ಸುಮಾ ದೇಸಾಯಿ ಹಾಗೂ ಸಂಗಡಿಗರಿಂದ ಭಕ್ತಿ ಗೀತೆಗಳು, ಸಂಜೆ 5 ರಿಂದ ರಾತ್ರಿ 8.30ರವರೆಗೆ ಗಣೇಶ ಮತ್ತು ಸಂಗಡಿಗರಿಂದ ಗೊಂಧಳ ಕಾರ್ಯಕ್ರಮ ನಡೆಯಲಿದೆ.

20ರಂದು ಬೆಳಗ್ಗೆ 7 ಗಂಟೆಗೆ ದೇವಸ್ಥಾನದಲ್ಲಿ ದೇವಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, 9 ಗಂಟೆಗೆ ದುರ್ಗಾ ಹೋಮ, ಪೂರ್ಣಹುತಿ ನೈವೇದ್ಯ ಹಾಗೂ ದೇವಿಯ ಮಂಗಳಾರತಿ, ಮಧ್ಯಾಹ್ನ 1.30ಕ್ಕೆ ಮಹಾ ಪ್ರಸಾದ ಹಾಗೂ ಸಂಜೆ 5ಕ್ಕೆ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪಾಸಾದ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ, 6ರಿಂದ ರಾತ್ರಿ 8 ಗಂಟೆವರೆಗೆ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳದವರಿಂದ ಭಕ್ತಿ ಗೀತೆ ಕಾರ್ಯಕ್ರಮ, ನಂತರ ಪ್ರಸಾದ ವಿತರಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net