ಚೌಡೇಶ್ವರಿ, ಮುನೀಶ್ವರ, ನಾಗ ಸಾನ್ನಿಧ್ಯಗಳ ವಾರ್ಷಿಕೋತ್ಸವ

7spt--9
ಸೋಮವಾರಪೇಟೆ ಕಾನ್ವೆಂಟ್ ಬಾಣೆಯ ಚೌಡೇಶ್ವರಿ, ಮುನೀಶ್ವರ ಹಾಗೂ ನಾಗ ಸಾನ್ನಿಧ್ಯಗಳ ಚೌಡೇಶ್ವರಿ ದೇವಾಲಯದಲ್ಲಿ ಭಕ್ತರು ಪೂಜೆ ಸಲ್ಲಿಸಿದರು.
Published on

ಸೋಮವಾರಪೇಟೆ: ಸಮೀಪದ ಕಾನ್ವೆಂಟ್ ಬಾಣೆಯ ಚೌಡೇಶ್ವರಿ, ಮುನೀಶ್ವರ ಹಾಗೂ ನಾಗ ಸಾನ್ನಿಧ್ಯಗಳ 56ನೇ ವಾರ್ಷಿಕೋತ್ಸವ ಗ್ರಾಮಸ್ಥರು ಹಾಗೂ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಬುಧವಾರ ಜರುಗಿತು.

ಮಂಗಳವಾರ ಚೌಡೇಶ್ವರಿ ದೇವಿಯ ಪೂಜೆಯೊಂದಿಗೆ ಪೂಜಾ ಕಾರ್ಯಗಳು ಸಂಪನ್ನಗೊಂಡಿತು. ನಂತರ ಭಕ್ತರಿಗೆ ಅನ್ನದಾನ ಮಾಡಲಾಗಿತ್ತು. ಸಂಜೆ ಗ್ರಾಮಸ್ಥರು ಹಾಗೂ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net