

ಹರಿಹರ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲಿ ವಿವಿಧ ಭಜನಾ ಮಂಡಳಿ ಮಹಿಳಾ ಸದಸ್ಯರು ಹಾಗೂ ಭಕ್ತರು ರಾಮ ಭಜನೆಯೊಂದಿಗೆ ರಾಮನ ಭಾವಚಿತ್ರದ ಮೆರವಣಿಗೆ ಮಾಡಿದರು.
ಅಲಂಕೃತ ವಾಹನದಲ್ಲಿ ಸಂಜೆ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ದೇವಸ್ಥಾನ ರಸ್ತೆ, ರಾಣಿ ಚನ್ನಮ್ಮ ವೃತ್ತ, ಗಾಂಧಿ ವೃತ್ತದ ಮೂಲಕ ಪೇಟೆ ಆಂಜನೇಯ ದೇವಸ್ಥಾನ, ಶಿವಮೊಗ್ಗ ರಸ್ತೆ, ಜೆ.ಸಿ. ಬಡಾವಣೆಯ ಒಂದನೇ ಮುಖ್ಯ ರಸ್ತೆಯ ಮೂಲಕ ರಾಜಾರಾಂ ಕಾಲನಿಯಲ್ಲಿರುವ ರಾಮ ಮಂದಿರಕ್ಕೆ ತಲುಪಿತು.
ಮೆರವಣಿಗೆಯಲ್ಲಿ ನಗರದ 32 ಭಜನಾ ಮಂಡಳಿಯ ಮಾತೆಯವರು ರಾಮ ನಾಮ ಜಪ ಮಾಡುತ್ತಾ ಮತ್ತು ಹಿಂದು ಕಾರ್ಯಕರ್ತರು ಶ್ರೀರಾಮನಿಗೆ ಜೈಕಾರ ಎಂದು ಘೊಷಣೆ ಕೂಗುತ್ತಾ ಸಾಗಿದರು. ರಾಮ ಮಂದಿರದಲ್ಲಿ ಭಜನೆ ಮಾಡಿ, ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಮೆರವಣಿಗೆಯಲ್ಲಿ ಡಾ. ಶಶಿಕುಮಾರ್ ಮೆಹರ್ವಾಡೆ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಶಿವ ಪ್ರಕಾಶ್ ಶಾಸ್ತ್ರಿ, ಕೃಷ್ಣಮೂರ್ತಿ ಶೆಟ್ಟಿ, ಪರಶುರಾಮ ಕಾಟ್ವೆ, ಎಚ್. ದಿನೇಶ್, ತುಳುಜಪ್ಪ ಭೂತೆ, ರಾಜು ಕಿರೋಜಿ, ಡಾ. ಸಿಂದಗಿ, ಪ್ರಶಾಂತಕುಮಾರ್, ರೂಪಾ ಕಾಟ್ವೆ, ನಂದಾ ಮೈಲಾರ ಸಿಂಗ್ ಸಾ ಕಾಟ್ವೆ, ಸಾಕ್ಷಿ ಶಿಂಧೆ, ಗೀತಾ.ಟಿ. ಭೂತೆ, ಸುಮನಾ ಖಮಿತ್ಕರ್, ರೂಪಾ ಶಶಿಕಾಂತ್, ಸಂತೋಷಿ ಮೋಹಿತೆ, ವಾಸವಿ ಪ್ರಣತಿ ಮಂಡಳಿ ಸದಸ್ಯರು ಹಾಗೂ ಇತರರಿದ್ದರು.