

ನಂದಗುಡಿ: ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಸುಗ್ಗಲಮ್ಮದೇವಿ ದೇವಾಲಯದ ಐದನೇ ವಾರ್ಷಿಕೋತ್ಸವ ಮತ್ತು ಡಾ.ಶಿವಕುಮಾರ ಸ್ವಾಮೀಜಿ 117ನೇ ಜಯಂತ್ಯುತ್ಸವ ವಿಜೃಂಭಣೆಯಿಂದ ನಡೆಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ಹಾಗೂ ಯುವತಿಯರು ದೀಪಾರತಿ ಬೆಳಗಿದರು. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಹೋಮ, ವಿಶೇಷ ಪೂಜೆ, ದೇವರ ಆರಾಧನೆ, ಕೀರ್ತನೆ ನಡೆದವು.
ಸಿದ್ಧಗಂಗಾ ಮಠದ ಲಿ.ಡಾ.ಶಿವಕುಮಾರ ಸ್ವಾಮೀಜಿ 117ನೇ ಜಯಂತ್ಯುತ್ಸವ ಪ್ರಯುಕ್ತ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.