

ಹುಬ್ಬಳ್ಳಿ : ಶ್ರೀ ಬಲಭೀಮ ಪಾಚಕರ ಸಂಘದ 5ನೇ ವಾರ್ಷಿಕೋತ್ಸವ ಸಮಾರಂಭವನ್ನು ಇಲ್ಲಿನ ಭವಾನಿನಗರದ ರಾಯರ ಮಠದ ಸುಜಯೀಂದ್ರ ಸಭಾಭವನದಲ್ಲಿ ಆಚರಿಸಲಾಯಿತು.
ಗಾಯಕ ಶೇಷಗಿರಿದಾಸ ಮತ್ತು ಗಣ್ಯರು ಉದ್ಘಾಟಿಸಿದರು. ಉದಯೋನ್ಮುಖ ತಬಲಾ ಕಲಾವಿದ ಪ್ರಶಾಂತ ಇಬ್ರಾಹಿಂಪುರ ಹಾಗೂ ತಂಡದವರಿಂದ ತಬಲಾ ವಾದನ ನೆರವೇರಿತು.
ಗೋವಿಂದ ಜೋಶಿ, ರಾಯರ ಮಠದ ವಿಚಾರಣಾಕರ್ತ ಎ. ಸಿ. ಗೋಪಾಲ, ಜೆ. ವೇಣುಗೋಪಾಲಾಚಾರ್ಯ, ಗುಂಡಪ್ಪ ವಾಳ್ವೇಕರ, ಗಾಯಕ ಶೇಷಗಿರಿದಾಸ, ಎಕೆಬಿಎಂಎಸ್ ಧಾರವಾಡ ಜಿಲ್ಲಾ ಸಂಚಾಲಕ ಲಕ್ಷ ಣ ಕುಲಕರ್ಣಿ, ರಾಘವೇಂದ್ರ ಗಂಡಮಾಲಿ, ಶ್ರೀ ಬಲಭೀಮ ಪಾಚಕರ ಸಂಘದ ಅಧ್ಯಕ್ಷ ಕಲ್ಯಾಣಿ ಜೋಶಿ, ಪ್ರಧಾನ ಕಾರ್ಯದರ್ಶಿ ತೇಜಸ್ ಠಾಣೇದಾರ, ಬಿಂದುಮಾಧವ ಪುರೋಹಿತ, ಸುಶೀಲೇಂದ್ರ ಕುಲಕರ್ಣಿ, ಶ್ರೀನಿವಾಸ ಪಾಟೀಲ, ರಾಮಚಂದ್ರ ಕುಲಕರ್ಣಿ, ಸಂತೋಷ ವೈದ್ಯ, ವಂದನಾ ಪುರೋಹಿತ, ಸುನೀಲ ಗುಮಾಸ್ತೆ, ರಾಜು ದೇಸಾಯಿ, ಮಿಥುನ ಕುಲಕರ್ಣಿ ಹಾಗೂ ಇತರರು ಪಾಲ್ಗೊಂಡಿದ್ದರು. ವಿಷ್ಣುತೀರ್ಥ ಕಲ್ಲೂರಕರ ಅವರು ನಿರೂಪಿಸಿ, ವಂದಿಸಿದರು.