ಶ್ರೀ ವಿಶ್ವಕರ್ಮ ಭಜನಾ ಸಂಘದ ವಾರ್ಷಿಕೋತ್ಸವ

Ksd_Vishwakarma 14
Published on

ಕಾಸರಗೋಡು: ಶ್ರೀ ವಿಶ್ವಕರ್ಮ ಭಜನಾ ಮಂದಿರದ ಶ್ರೀ ವಿಶ್ವಕರ್ಮ ಭಜನಾ ಸಂಘದ 68ನೇ ವಾರ್ಷಿಕೋತ್ಸವ ನಡೆಯಿತು.

ಗಣಪತಿ ಹೋಮದ ನಂತರ ಸಂಘದ ಅಧ್ಯಕ್ಷ ಭುವನೇಶ ಆಚಾರ್ಯ ತಾಳಿಪಡ್ಪು ಧ್ವಜಾರೋಹಣ ನಡೆಸಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭಜನಾ ಸಂಕೀರ್ತನೆಯನ್ನು ತಂತ್ರಿ ಮಾಯಿಪ್ಪಾಡಿ ಮಾಧವ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಮಾಯಿಪ್ಪಾಡಿ ಕೇಶವ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಪುರೋಹಿತ ಪರಕ್ಕಿಲ ಧರ್ಮೇಂದ್ರ ಆಚಾರ್ಯ ಉಪಸ್ಥಿತರಿದ್ದರು. ಹಿರಿಯ ಸಂಗೀತ ಕಲಾವಿದ ಕಲ್ಮಾಡಿ ಸದಾಶಿವ ಆಚಾರ್ಯ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳು ಭಜನಾ ಸಂಕೀರ್ತನೆ ನಡೆಸಿಕೊಟ್ಟವು.ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಹುಲ್ಪೆ ಮೆರವಣಿಗೆ ಮಕ್ಕಳ ಕುಣಿತ ಭಜನೆಯೊಂದಿಗೆ ದೀಪ, ಮುತ್ತುಕೊಡೆ, ಫಲಪುಷ್ಪಗಳೊಂದಿಗೆ ಸಮವಸ್ತ್ರ ಧರಿಸಿದ ಕಾರ್ಯಕರ್ತರು, ಚೆಂಡೆ ನಾಸಿಕ್ ಬ್ಯಾಂಡ್‌ನೊಂದಿಗೆ ಮಂದಿರಕ್ಕೆ ಆಗಮಿಸಿತು.

ಕುಣಿತ ಭಜನೆ ತರಬೇತಿ ನೀಡಿದ ವಿಶ್ವಕರ್ಮ ಮಹಿಳಾ ಸಂಘದ ಕಾರ್ಯದರ್ಶಿ ಹೇಮಲತಾ ಗಣೇಶ್ ಆಚಾರ್ಯ ಮತ್ತು ಯುವಕ ಸಂಘದ ಸದಸ್ಯ ಆಕಾಶ್ ಆಚಾರ್ಯ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net