ವಿಮರ್ಶೆಯಿಂದ ಯಕ್ಷಗಾನದ ಪ್ರಗತಿ : ಹರಿನಾರಾಯಣ ಆಸ್ರಣ್ಣ ಅಭಿಪ್ರಾಯ

New Project (19)
Published on

ಗುರುಪುರ : ಯಕ್ಷಗಾನದಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡುತ್ತದೆ. ಯಕ್ಷಗಾನದ ಪ್ರಗತಿಯಲ್ಲಿ ಸೂಕ್ತ ವಿಮರ್ಶೆ ಅವಶ್ಯ. ಇಲ್ಲವಾದಲ್ಲಿ ಯಕ್ಷಗಾನ ಹಾದಿ ತಪ್ಪುತ್ತದೆ. ಹಳ್ಳಿಗಳಲ್ಲೂ ಯಕ್ಷಗಾನ ಕೇಂದ್ರಗಳು ಇರಬೇಕು ಎಂದು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದರು.

ಕುಪ್ಪೆಪದವು ಶ್ರೀ ದುರ್ಗೇಶ್ವರಿ ಯಕ್ಷಗಾನ ಮಂಡಳಿ ಆಶ್ರಯದಲ್ಲಿ ನಡೆಯುವ ಶ್ರೀ ದುರ್ಗೇಶ್ವರಿ ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳ ‘ರಂಗಪ್ರವೇಶ’ ಮತ್ತು ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗುರು ರಾಕೇಶ್ ರೈ ಅಡ್ಕ, ಡಾಕ್ಟರೇಟ್ ಪಡೆದಿರುವ ಉಜ್ವಲಾ ಜೈನ್ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಅಜಿತ್ ಕುಮಾರ್ ಜೈನ್ ಕುಪ್ಪೆಪದವು, ದುರ್ಗೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗುರುಪ್ರಸಾದ್ ಕಾರಂತ, ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್ ಕುಮಾರ್ ಅಗರಿ, ಅಗರಿ ವಾದಿರಾಜ ರಾವ್, ಚಂದ್ರಹಾಸ ಶೆಟ್ಟಿ ನಾರಳ, ರಾಮಚಂದ್ರ ಸಾಲ್ಯಾನ್, ಗಿರೀಶ್ ಆಳ್ವ, ದಿನಕರ ಮೇಂಡ, ನಿವೃತ್ತ ಅಧ್ಯಾಪಕ ಭೋಜರಾಜ್ ಜೈನ್, ಉದ್ಯಮಿ ಜಗದೀಶ ಕುಲಾಲ್ ಪಾಕಜೆ, ರಂಜನ್ ಕುಮಾರ್ ಶೆಟ್ಟಿ ಕೋಟೆ ಅರಳ, ವಿಕ್ರಂ ಭಟ್, ಭಾಸ್ಕರ್ ಕುಲಾಲ್ ಮೊಗರು, ಅಶೋಕ್ ದೇವಾಡಿಗ, ವಿನಯ್ ಕಾರಂತ ಉಪಸ್ಥಿತರಿದ್ದರು.

ಗಣೇಶ್ ಪಾಕಜೆ ಸ್ವಾಗತಿಸಿದರು. ಯಶವಂತ ಅಗರಿ ಸನ್ಮಾನ ಪತ್ರ ಓದಿದರು. ವಿಜೆ ಮನೋಜ್ ವಾಮಂಜೂರು ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net