

ಮಡಿಕೇರಿ:
ವಿರಾಜಪೇಟೆ ತಾಲೂಕು ಅರಮೇರಿ ಗ್ರಾಮದ ಎಂಟುಮಾಣಿಕೇರಿ ಶ್ರೀ ಕಾವೇರಿ ಸಂಘದ ಐದನೇ ವಾರ್ಷಿಕ ಮಹಾಸಭೆ ಈಚೆಗೆ ನಡೆಯಿತು. ಸಂಘದ ಅಧ್ಯಕ್ಷ ಉದಿಯಂಡ ಡಿ.ಚಂಗಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಕಟ್ಟಡ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ತಡೆಗೋಡೆಯನ್ನು ದಾನಿ ಪೊಯಟ್ಟಿರ ಜಿ .ಪ್ರಧಾನ್ ತಮ್ಮಯ್ಯ ಮತ್ತು ಪತ್ನಿ ರಿತಂ ಇದೇ ಸಂದರ್ಭ ಉದ್ಘಾಟಿಸಿದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಶ್ರೀ ಪೊಳಂಡ ಪಿ. ವಿನು ಪೆಮ್ಮಯ್ಯ ಮತ್ತು ವಿರಾಜಪೇಟೆ ಸೆಸ್ಕ್ ಉದ್ಯೋಗಿ ಸಲ್ಮಾನ್ ಖಾನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮೇಜರ್ ಪೊಳಂಡ ಪಿ ಕಾರ್ಯಪ್ಪ ರಕ್ಷಿತ್ ಅವರ ಪ್ರೋತ್ಸಾಹಕ ವಿದ್ಯಾನಿಧಿಯ ಹತ್ತು ಸಾವಿರ ರೂಪಾಯಿ ನಾಯಕಂಡ ಆಶಿಕ್ ಹರೀಶ್ ಪಡೆದುಕೊಂಡರು.
ಸಂಘದ ಕಾರ್ಯದರ್ಶಿ ಸೋಮಯಂಡ ಕೆ. ರೇಷ್ಮಾ ತಿಮ್ಮಯ್ಯ, ಪೊಳಡ ಲೀಲಾ, ಪವೀನಾ, ಮೈನಾ, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.