

ಹುಬ್ಬಳ್ಳಿ: ಇಲ್ಲಿಯ ರೇಣುಕಾ ಶಿಕ್ಷಣ ಮತ್ತು ಕಲ್ಯಾಣ ಕೇಂದ್ರದ 18ನೇ ವಾರ್ಷಿಕೋತ್ಸವ, 77ನೇ ಸ್ವಾತಂತ್ರ್ಯೋತ್ಸವ ಹಾಗೂ ಕೌಶಲ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಅತಿಥಿಯಾಗಿದ್ದ ಕೌಶಲ ಅಭಿವೃದ್ಧಿ ಇಲಾಖೆ ಅಧಿಕಾರಿ ಡಾ. ಚಂದ್ರಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವರುದ್ರಪ್ಪ ಎಚ್., ಎಂಎಸ್‌ಎಂಇ ವಿಭಾಗದ ಬಿ.ಎಸ್. ಜವಳಗಿ, ಗ್ರಾಮೀಣ ಕೈಗಾರಿಕೆ ಅಧಿಕಾರಿ ಎ.ಎಂ. ತಾರಕೇಶ್ವರ, ಇತರರು ಮಾತನಾಡಿದರು.
ಡಾ. ಸುನಿತಾ ಎಲ್. ಅವರು, ತರಬೇತಿ ನಂತರ ವಿವಿಧ ಇಲಾಖೆಗಳಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮಂಜುನಾಥ ಬಾರಕೇರ, ಶೋಭಾ ಮೈಸೂರು ಕಾರ್ಯಕ್ರಮ ನಿರ್ವಹಿಸಿದರು.