

ವಿಜಯಪುರ: ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳುವಳಿಯ 82ನೇ ವರ್ಷಾಚರಣೆ ಆಚರಿಸಲಾಯಿತು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಳುವಳಿಯ ವಿಶೇಷತೆ ಕುರಿತು ಸ್ಮರಿಸಲಾಯಿತು.
ಮಹಾತ್ಮ ಗಾಂಧೀಜಿ 1942 ಆಗಸ್ಟ್ 9ನೇ ತಾರೀಖಿನಂದು ಬ್ರಿಟೀಷರ ವಿರುದ್ಧ ಹೋರಾಟ ಪ್ರಾರಂಭಿಸಿದರು. ಮುಂದೆ ನಮಗೆ ಈ ಹೋರಾಟವೇ ಭಾರತ ಸ್ವಾತಂತ್ರ್ಯ ಹೊಂದಲು ಬುನಾದಿಯಾಯಿತು. ಮಹಾತ್ಮ ಗಾಂಧೀಜಿ ಹಮ್ಮಿಕೊಂಡ ಈ ಹೋರಾಟ ಬ್ರಿಟೀಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿತು. ಈ ಹೋರಾಟಗಳಲ್ಲಿ ಅನೇಕ ಜನ ಹೋರಾಟಗಾರರು ತಮ್ಮ ತ್ಯಾಗ ಬಲಿದಾನ ಮಾಡಿ ಇಂದು ನಾವು ಸ್ವತಂತ್ರವಾಗಿ ಬದುಕಲು ದಾರಿ ಮಾಡಿಕೊಟ್ಟರು. ಈ ಮಹಾಪುರುಷರು ಹಾಕಿಕೊಟ್ಟ ದಾರಿ ಅಮೋಘವಾಗಿದ್ದು, ನಾವು ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಅಫ್ಜಲ ಜಾನವೇಕರ, ನಗರ ಬ್ಲಾಕ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪೂರ, ವಸಂತ ಹೊನಮೊಡೆ, ಎಂ. ಎಂ. ಮುಲ್ಲಾ (ದ್ಯಾಬೇರಿ), ಸಾಹೇಬಗೌಡ ಬಿರಾದಾರ, ಚನಬಸಪ್ಪ ನಂದರಗಿ, ದೇಸು ಚವಾಣ್, ಸುಭಾಸ ಕಾಲೇಬಾಗ, ಬಾಪುಗೌಡ ಪಾಟೀಲ, ಎಂ.ಬಿ. ಮೇಡೆಗಾರ, ಕಾಶಿಬಾಯಿ ಹಡಪದ, ಗಂಗವ್ವ ಕಣಮುಚನಾಳ, ಮಲ್ಲಿಕಾರ್ಜುನ ಗಬಸಾವಳಗಿ, ನಿಂಗಪ್ಪ ಸಂಗಾಪೂರ, ದಾನಪ್ಪ ಸೂರಗೊಂಡ ಮತ್ತಿತರರಿದ್ದರು.