

ಮಡಿಕೇರಿ: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ಮಾ೧ ರಿಂದ ೧೧ ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾ.೧ ರಾತ್ರಿ ೮ ಗಂಟೆಗೆ ಕೊಡಿಮರ ನಿಲ್ಲಿಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಗುವುದು. ೨ರಂದು ಬೆಳಗ್ಗೆ ೧೧ ಗಂಟೆಯಿಂದ ನಿತ್ಯ ಪೂಜೆ, ಸಂಜೆ ೭ ಗಂಟೆಗೆ ತೂಚಂಬಲಿ, ೩ರಂದು ಪ್ರಾತ:ಕಾಲ ೫ ಗಂಟೆಗೆ ಉತ್ಸವ ಮೂರ್ತಿ ದರ್ಶನ, ೧೧ ಯಿಂದ ನಿತ್ಯ ಪೂಜೆ, ಸಂಜೆ ೭ ಗಂಟೆಗೆ ತೂಚಂಬಲಿ, ೪ ರಂದು ಪ್ರಾತ:ಕಾಲ ೫ ಗಂಟೆಗೆ ಉತ್ಸವಮೂರ್ತಿ ದರ್ಶನ, ಬೆಳಗ್ಗೆ ೧೦ ಗಂಟೆಗೆ ಭಂಡಾರ ಬರುವುದು, ಸಂಜೆ ೭ ಗಂಟೆಗೆ ತೂಚಂಬಲಿ, ಮಾ.೫ ರಂದು ಪ್ರಾತಃಕಾಲ ೫ ಗಂಟೆಗೆ ಇರುಬಳಕು, ೧೧ ಗಂಟೆಯಿಂದ ನಿತ್ಯಪೂಜೆ ಮತ್ತು ತುಲಾಭಾರ ಸೇವೆ ಮತ್ತು ಸಂಜೆ ೭ ಗಂಟೆಗೆ ತೂಚಂಬಲಿ ನಡೆಯಲಿದೆ ಎಂದು ತಿಳಿಸಿದೆ.
ಮಾ೬ ರಂದು ಪ್ರಾತ:ಕಾಲ ೫ ಗಂಟೆಗೆ ಇರುಬಳಕು, ಬೆಳಗ್ಗೆ ೧೧ ಗಂಟೆಯಿಂದ ನಿತ್ಯ ಪೂಜೆ, ತುಲಾಭಾರ, ಸಂಜೆ ೭ ಗಂಟೆಗೆ ತೂಚಂಬಲಿ ಮತ್ತು ಉತ್ಸವಮೂರ್ತಿ ದರ್ಶನ ಇರಲಿದೆ. ಮಾ.೧೧ರಂದು ಬೆಳಗ್ಗೆ ೧೦ ಗಂಟೆಗೆ ನಿತ್ಯ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ತುಲಾಭಾರ, ಮಧ್ಯಾಹ್ನ ೩ ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಂಜೆ ೫ ಗಂಟೆಗೆ ದೇವರ ಉತ್ಸವಮೂರ್ತಿ ದರ್ಶನ, ಅವಭೃತ ಸ್ನಾನ, ರಾತ್ರಿ ಉತ್ಸವಮೂರ್ತಿ ದರ್ಶನ, ನಂತರ ವಸಂತ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಸಂಜೆ ೬ಗಂಟೆಯಿಂದ ರಾತ್ರಿ ೮.೩೦ ರವರೆಗೆ ಭೋಜ ಸೌಂಡ್ಸ್ ಹುಣಸೂರು ಇವರ ಪ್ರಾಯೋಜಕತ್ವದಲ್ಲಿ ಜೀ ಕನ್ನಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದೆ.
ಮಾ.೧೨ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕೊಡಿಮರ ಇಳಿಸಲಾಗುವುದು. ೧೧ ಗಂಟೆಯಿಂದ ಎಂದಿನಂತೆ ನಿತ್ಯ ಪೂಜೆ ನಡೆಯಲಿದೆ. ತುಲಾಭಾರ ಸೇವೆ ಮಾಡಿಸುವವರು ಅಕ್ಕಿ, ಬೆಲ್ಲ, ಎಣ್ಣೆ, ತರಕಾರಿ ಇತ್ಯಾದಿ ವಸ್ತುಗಳನ್ನು ಭಕ್ತಾದಿಗಳು ತರಬೇಕೆಂದು ಮನವಿ ಮಾಡಿದ ದೇವಾಲಯದ ಆಡಳಿತ ಮಂಡಳಿ, ತುಲಾಭಾರ ಸೇವೆಯು ಮಾ೫ ರಿಂದ ೧೧ರವರೆಗೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ೮೧೯೭೮ ೭೦೦೫೮ ಸಂಪರ್ಕಿಸಬಹುದು ಎಂದು ತಿಳಿಸಿದೆ.