ಶ್ರೀವಿಠ್ಠಲ ರಾಧಾ ರಖುಮಾಯಿ ದೇವರ ವಾರ್ಷಿಕೋತ್ಸವ

15sor1
ಸೊರಬದ ಪ್ರಮುಖ ರಸ್ತೆಯಲ್ಲಿ ಶ್ರೀವಿಠ್ಠಲ ರಾಧಾ ರಖುಮಾಯಿ ದೇವರ ದಿಂಡಿ ಹಾಗೂ ರಾಜಬೀದಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ಜರುಗಿತು.
Published on

ಸೊರಬ: ಪಟ್ಟಣದ ಶ್ರೀವಿಠ್ಠಲ ರಾಧಾರಖುಮಾಯಿ ದೇವಸ್ಥಾನದಲ್ಲಿ ಬುಧವಾರ ನಾಮದೇವ ಸಿಂಪಿ ಸಮಾಜದಿಂದ ೧೧ನೇ ವರ್ಷದ ಮರು ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು.
ಸಂತ ಕೃಷ್ಣಮೂರ್ತಿ ಬೆನ್ನೂರು ನೇತೃತ್ವದಲ್ಲಿ ಶ್ರೀ ರಾಮಚಂದ್ರ ದೇವಸ್ಥಾನದಿಂದ ಶ್ರೀವಿಠ್ಠಲ ಹರಿ ಮಂದಿರಕ್ಕೆ ಪೋತಿ ತರುವುದರ ಮೂಲಕ ಪೋತಿ ಸ್ಥಾಪನೆ, ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವರಿಗೆ ಎಳನೀರು ಅಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ನಡೆಯಿತು. ಸಂತ ಜ್ಞಾನೇಶ್ವರ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ನಡೆಯಿತು. ವಾಸುದೇವ ಉಡುಪ ಅವರ ಅರ್ಚಕತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು.
ಸತ್ಯನಾರಾಯಣರಾವ್ ಕುಂಠೆ ನೇತೃತ್ವದಲ್ಲಿ ಶ್ರೀ ಜ್ಞಾನೇಶ್ವರಿ ಪಾರಾಯಣ ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಮಹಿಳಾ ಭಜನಾ ಮಂಡಳಿಯಿAದ ವಿಷ್ಣು ಸಹಸ್ರನಾಮ ಪಠಣ, ಸಂತ ಶಿರೋಮಣಿ ಬದರಿನಾಥ್ ಉತ್ತರಕರ್ ಅವರಿಂದ ಪಂಡಿ ಸಂಪ್ರದಾಯದ ಕೀರ್ತನೆ, ಸಂತವಾಣಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂತರಿAದ ಮತ್ತು ನಾಮದೇವ ಯುವ ಹಾಗೂ ಮಹಿಳಾ ಭಜನಾ ಮಂಡಳಿಯಿAದ ಭಜನಾ ಕಾರ್ಯಕ್ರಮ ನಡೆಯಿತು.
ಗುರುವಾರ ಪಟ್ಟಣದ ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವರ ದಿಂಡಿ, ರಾಜಬೀದಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು. ನಂತರ ಹರಪ್ಪನಹಳ್ಳಿಯ ಶ್ರೀ ಜ್ಞಾನೇಶ್ವರ ಮಹಾರಾಜರಿಂದ ಕಾಲಾ ಕೀರ್ತನೆ ಮಹಾಮಂಗಳಾರತಿ ಪ್ರಸಾದ ಮತ್ತು ಮಹಾಪ್ರಸಾದ ವಿನಿಯೋಗ ನಡೆಯಿತು.
ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಬಿ.ಗಿರೀಶ್, ಎ.ಗೋವಿಂದ ರಾವ್, ರವಿಕುಮಾರ ಜಿ.ಭಾಂಬೊರೆ, ವಸಂತಕುಮಾರ ಭಾಂಬೊರೆ, ಸತೀಶ್ ಬೋಂಗಾಳೆ, ಸರೋಜಾ, ಮಮತಾ, ಇಂದುಮತಿ, ಭಾರತಿ, ದೀಪಾ, ವೀಣಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net