ಯುವ ಜನತೆ ಕೃಷಿಯಿಂದ ಹಿಮ್ಮುಖ : ಹಿರಿಯ ಕೃಷಿಕ ಪದ್ಮನಾಭ ಕುಂದರ್ ಕಳವಳ

New Project (56)
Published on

ಕಿನ್ನಿಗೋಳಿ: ಯುವ ಜನತೆ ಕೃಷಿಯಿಂದ ಹಿಮ್ಮುಖವಾಗುತ್ತಿದ್ದಾರೆ. ಆಧುನಿಕ ಕೃಷಿ ಪದ್ಧತಿ ಮೈಗೂಡಿಸಿಕೊಂಡು ಯುವಜನತೆ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳಬೇಕು ಎಂದು ಹಿರಿಯ ಕೃಷಿಕ ಪದ್ಮನಾಭ ಕುಂದರ್ ಹೇಳಿದರು.

ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಆದರ್ಶ ಬಳಗದ ವಾರ್ಷಿಕೋತ್ಸವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅಂತಾರಾಷ್ಟ್ರೀಯ ಯೋಗಪಟು ಮೇಶ್ರೀ ಶೆಟ್ಟಿ ಕೆಜಿಬೆಟ್ಟು, ಎಂ.ಬಿ.ಎ.ಯಲ್ಲಿ ಚಿನ್ನದ ಪದಕ ಪಡೆದ ನೇಹಾ ವೈ.ದೇವಾಡಿಗ, ಸಿ.ಎ.ಯಲ್ಲಿ ಸಾಧನೆ ಮಾಡಿದ ಪ್ರತೀಕ್ಷಾ ಶೆಟ್ಟಿ ಹಾಗೂ ದ.ಕ. ಜಿಲ್ಲಾ ರಾಜೋತ್ಸವ ಪುರಸ್ಕೃತ ಪ್ರಕಾಶ್ ಆಚಾರ್ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಸಾಧನೆ ಮಾಡಿದ ಸ್ಥಳೀಯ ವಿದ್ಯಾರ್ಥಿಗಳಾದ ಸೃಷ್ಟಿ ಶೆಟ್ಟಿ, ಚಿನ್ಮಯ್, ಜೀವಿತಾ ಶೆಟ್ಟಿ, ಸೃಜನ್‌ಚಂದ್ರ ಮಂಡಲ, ಪ್ರತೀಕ್ಷಾ ಆಚಾರ್ಯ, ಸ್ವಸ್ತಿಕ್ ವೈ.ಕೋಟ್ಯಾನ್, ಆಕೃತಿ ಡಿ.ಅಮೀನ್ ಗೌರವಿಸಲಾಯಿತು.

ಕೊಡೆತ್ತೂರು ದೇವಸ್ಯಮಠದ ವೇದವ್ಯಾಸ ಉಡುಪ, ಕೆ.ಭುವನಾಬಿರಾಮ ಉಡುಪ, ಕೊಡೆತ್ತೂರು ಜಯರಾಮ ಮುಕಾಲ್ದಿ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಪುರುಷೋತ್ತಮ ಕೊಡೆತ್ತೂರು, ಸುಧೀರ್ ಶೆಟ್ಟಿ ಶಿಮಂತೂರು, ನಿವೃತ್ತ ಶಿಕ್ಷಕ ಕೆ.ವಿ.ಶೆಟ್ಟಿ, ಸುರತ್ಕಲ್ ಒರಿಯಂಟಲ್ ವಿಮಾ ಸಂಸ್ಥೆಯ ಯಾದವ ದೇವಾಡಿಗ, ಆದರ್ಶ ಬಳಗದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮತ್ತಿತರರಿದ್ದರು.

ದಾಮೋದರ ಶೆಟ್ಟಿ ಸ್ವಾಗತಿಸಿದರು. ನಾಗರಾಜ ಶೆಟ್ಟಿ, ಸೃಷ್ಟಿ, ವೃಷ್ಟವಿ ಶೆಟ್ಟಿ, ರಿದಿ ಶೆಟ್ಟಿ ಸವ್ಮಾನ ಪತ್ರ ವಾಚಿಸಿದರು. ಕೇಶವ ಕರ್ಕೇರ ನಿರೂಪಿಸಿದರು. ಯುವರಾಜ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net