ರೋಗಿಗಳೊಂದಿಗೆ ಇರಲಿ ಉತ್ತಮ ಬಾಂಧವ್ಯ...

UDP-10-4-Vaarshikothsava
Published on

ವಿದ್ಯಾರ್ಥಿಗಳಿಗೆ ಡಾ. ಮೋನಪ್ಪ ನಾಯ್ಕ್​ ಕಿವಿಮಾತು

ಧನ್ವಂತರಿ ನರ್ಸಿಂಗ್​ ಕಾಲೇಜಿನಲ್ಲಿ ವಾರ್ಷಿಕೋತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ಶಿಕ್ಷಣವೆಂಬುದು ನಿಂತ ನೀರಿನಂತಾಗದೆ ಜೀವನದುದ್ದಕ್ಕೂ ಬೇರೆ ಬೇರೆ ವಿಷಯಗಳ ಕುರಿತು ಜ್ಞಾನ ಸಂಪಾದಿಸುತ್ತಲೇ ಇರಬೇಕು. ವೈದ್ಯರಾದ ಬಳಿಕ ರೋಗಿಗಳೊಂದಿಗೆ ಉತ್ತಮ ಸಂವಹನ, ಬಾಂಧವ್ಯ ಕಾಯ್ದುಕೊಂಡು ಹೆತ್ತವರ ಹೆಸರನ್ನು ಬೆಳಗಬೇಕು. ಕೀರ್ತಿವಂತರಾಗಿ ಸಮಾಜದಲ್ಲಿ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಮೂಳೆ ರೋಗಗಳ ಘಟಕದ ಮುಖ್ಯಸ್ಥ ಡಾ. ಮೋನಪ್ಪ ನಾಯ್ಕ್​ ಕಿವಿಮಾತು ಹೇಳಿದರು.

ಉಡುಪಿಯ ಸಂತೆಕಟ್ಟೆಯಲ್ಲಿರುವ ಧನ್ವಂತರಿ ನರ್ಸಿಂಗ್​ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಪ್ರಶಸ್ತಿ ಪ್ರದಾನ

ಸಂಸ್ಥೆಯ ಸಂಸ್ಥಾಪಕ ಟಿ.ವಿ. ರಾವ್​ ಹೆಸರಿನಲ್ಲಿ ನೀಡುವ ಪ್ರತಿಷ್ಠಿತ ಟಿ.ವಿ. ರಾವ್​ ಪ್ರಶಸ್ತಿಯನ್ನು ವಾದಿರಾಜ ಕುಂದರ್​ ಮಟ್ಟು ಅವರಿಗೆ ಪ್ರದಾನ ಮಾಡಲಾಯಿತು. ಸಂಸ್ಥೆಯಲ್ಲಿ ಹತ್ತು ವರ್ಷಕ್ಕೂ ಹೆಚ್ಚುಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಚೇರ್ಮನ್​ ಡಾ. ಉಮೇಶ್​ ಪ್ರಭು ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಆಡಳಿತಾಧಿಕಾರಿ ಉದಯಕುಮಾರ್​ ಸ್ವಾಗತಿಸಿದರು. ಕಾಲೇಜ್​ ಆಫ್​ ನರ್ಸಿಂಗ್​ನ ಪ್ರಾಂಶುಪಾಲೆ ಪ್ರೊ. ಲತಾ ಹಾಗೂ ಸ್ಕೂಲ್​ ಆಫ್​ ನರ್ಸಿಂಗ್​ನ ಪ್ರಾಂಶುಪಾಲ ಶಿವಪ್ರಸಾದ್​ ಪ್ರಭು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net