ಬಸ್ ಚಾಲಕ, ನಿರ್ವಾಹಕ ಸಂಘದ ವಾರ್ಷಿಕೋತ್ಸವ

New Project (38)
Published on

ಕಿನ್ನಿಗೋಳಿ: ಇಲ್ಲಿನ ಬಸ್ ಚಾಲಕ ಮತ್ತು ನಿರ್ವಾಹಕ ಸಂಘದ 12ನೇ ವಾರ್ಷಿಕೋತ್ಸವ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ನಡೆಯಿತು.

ಎ.ಪಿ.ಎಂ.ಸಿ. ಸದಸ್ಯ ಪ್ರಮೋದ್ ಕುಮಾರ್ ಮಾತನಾಡಿ, ಬಸ್ಸು ಚಾಲಕ, ನಿರ್ವಾಹಕರು ಶ್ರಮ ಜೀವಿಗಳು. ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುರಕ್ಷಿತವಾಗಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಂಚಾರಿ ಪೊಲೀಸ್ ಅಧಿಕಾರಿ ಯೋಗೇಶ್ ಎಸ್.ಆರ್., ಎ.ಎಸ್.ಐ. ಸಂಜೀವ ಎ.ಪಿ. ಅವರನ್ನು ಸನ್ಮಾನಿಸಲಾಯಿತು. 11 ಮಂದಿ ಹಿರಿಯ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಗೌರವಿಸಲಾಯಿತು. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.

ಮೂಲ್ಕಿ ಪೊಲೀಸ್ ಅಧಿಕಾರಿ ಅನಿತಾ, ಬಸ್ ಮಾಲಕ ಸಂಘ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ತಾ.ಪಂ. ಮಾಜಿ ಸದಸ್ಯ ದಿವಾಕರ ಕರ್ಕೇರ, ಸಂಸ್ಥೆ ಅಧ್ಯಕ್ಷ ಸಂದೀಪ್ ಅಂಚನ್, ಗೌರವಾಧ್ಯಕ್ಷ ಭಾಸ್ಕರ ಪೂಜಾರಿ, ಕಾರ್ಯದರ್ಶಿ ಕ್ಯಾನ್ಯುಟ್ ಕ್ಯಾಸ್ಟಲಿನೋ, ಕೋಶಾಧಿಕಾರಿ ಅಬ್ಬು ಮತ್ತಿತರರಿದ್ದರು. ಪ್ರಕಾಶ್ ಕಿನ್ನಿಗೋಳಿ, ಹರೀಶ್ ಪಕ್ಷಿಕೆರೆ ಸನ್ಮಾನ ಪತ್ರ ವಾಚಿಸಿದರು. ಶರತ್ ಕಿನ್ನಿಗೋಳಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net