ಶೈಕ್ಷಣಿಕ ಅಭಿವೃದ್ಧಿಗೆ ಸ್ಪಂದನೆ ಮಾದರಿ ಕಾರ್ಯ :ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅನಿಸಿಕೆ

New Project (46)
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಗ್ರಾಮೀಣ ಪ್ರದೇಶದಲ್ಲಿ ಸಂಘಟನೆ, ಶಿಕ್ಷಣ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಪೂರಕವಾಗಿ ಸ್ಪಂದಿಸುವ ಮೂಲಕ ಬಡಗುಹಿತ್ಲು ಯುವಕ ಯುವತಿ ಮಂಡಲ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಹೇಳಿದರು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬಳಿಯ ಬಡಗುಹಿತ್ಲು ಯುವಕ ಯುವತಿ ಮಂಡಲದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಕಾಶವಾಣಿ ಅತ್ಯುನ್ನತ ಶ್ರೇಣಿ ಪ್ರಶಸ್ತಿ ಪುರಸ್ಕೃತ ವಿದ್ವಾನ್ ನಾಗೇಶ್ ಎ.ಬಪ್ಪನಾಡು ಮತ್ತು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅವರನ್ನು ಗೌರವಿಸಲಾಯಿತು. ಶೈಕ್ಷಣಿಕ ಸಾಧಕರಾದ ಶಾಶ್ವತ್ ಬಿ.ಕರ್ಕೇರ, ಭೂಮಿಕಾ ಎಸ್.ಸಾಲ್ಯಾನ್, ಮನ್ವಿತಾ ಅಮೀನ್, ಧನ್ಯಾ ಜಗದೀಶ್, ಸಹನಾ, ಪೂರ್ವಿ ಯತೀಶ್ ಸಾಲ್ಯಾನ್, ಚೈತನ್ಯಾ ಯು.ಕೋಟ್ಯಾನ್, ಮನೀಷಾ ಅಮೀನ್, ಶ್ರೇಯಿತ್ ಜೆ.ಅಮೀನ್ ಅವರನ್ನು ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುವಾನ ವಿತರಿಸಲಾಯಿತು.

ಮೂಲ್ಕಿ ಶಾಂಭವಿ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಸಮಾಜ ಸೇವಕ ವಾಸು ಪೂಜಾರಿ ಚಿತ್ರಾಪು, ನಪಂ ಸದಸ್ಯರಾದ ದಯಾವತಿ ಅಂಚನ್ ಮತ್ತು ಬಾಲಚಂದ್ರ ಕಾಮತ್, ಉದ್ಯಮಿ ಮಧುಸೂಧನ್ ಶೆಟ್ಟಿಗಾರ್, ಭಾರತ್ ಕೋ ಆಪರೇಟಿವ್ ಬ್ಯಾಂಕ್ ನಿವತ್ತ ವ್ಯವಸ್ಥಾಪಕ ನಿರ್ದೇಶಕ ಜಯ ಶಿವಪ್ಪ ಪೂಜಾರಿ, ಉದ್ಯಮಿ ನಾರಾಯಣ ದೇವಾಡಿಗ ಬಡಗುಹಿತ್ಲು, ಯುವಕ ಮಂಡಲ ಅಧ್ಯಕ್ಷ ಅಶೋಕ್ ಆರ್.ಅಮೀನ್, ಯುವತಿ ಮಂಡಲ ಅಧ್ಯಕ್ಷೆ ಪ್ರೇಮಲತಾ ತುಕಾರಾಮ್ ಮುಖ್ಯ ಅತಿಥಿಗಳಾಗಿದ್ದರು.

ಯುವಕ ಮಂಡಲದ ಮಾಜಿ ಅಧ್ಯಕ್ಷ ಕಮಲಾಕ್ಷ ಬಡಗುಹಿತ್ಲು ಸ್ವಾಗತಿಸಿದರು. ಮನೀಷಾ ಅಮೀನ್ ಪ್ರಸ್ತಾವನೆಗೈದರು. ಮೋಹನ್ ಸುವರ್ಣ ಕೊಕ್ಕರಕಲ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೇಮಲತಾ ತುಕಾರಾಮ್ ವಂದಿಸಿದರು. ಬೆಳಗ್ಗೆ ಗಣರಾಜ್ಯೋತ್ಸವ ಆಚರಣೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net