ಬಿ.ಜಿ.ಎಸ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ

MDK04
Published on

ಮಡಿಕೇರಿ ಸಮೀಪದ ಮದೆನಾಡಿನ ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ವಹಿಸಿದ್ದರು. ಉದ್ಘಾಟನೆಯನ್ನು ಬಿ.ಜಿ.ಎಸ್ ಸಂಸ್ಥಾನದ ಮೈಸೂರು-ಕೊಡಗು ಶಾಖಾ ಮಠದ ಕಾರ್ಯದರ್ಶಿ ಸೋಮನಾಥೇಶ್ವರ ಸ್ವಾಮೀಜಿರವರು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಮದೆ ಮಹೇಶ್ವರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರಮುಖರಾದ ಹುದೇರಿ ರಾಜೇಂದ್ರ, ಪಟ್ಟಡ ಲೋಭಯ್ಯ, ಬಿ.ಸಿ.ಚೆನ್ನಪ್ಪ, ಹುಲಿಮನೆ ರಾಮಯ್ಯ, ವಿದ್ಯಾಸಂಸ್ಥೆಯ ಸ್ಥಳ ದಾನಿಗಳ ಕುಟುಂಬಸ್ಥರಾದ ಸಾಯಿ ಮುತ್ತಣ್ಣ ಮತ್ತು ಸಾಯಿ ಬೋಪಣ್ಣ, ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಸಾಹಿತಿಗಳಾದ ಬಿ.ಆರ್.ಜೋಯಪ್ಪ, ಮದೆ ಪಂಚಾಯಿತ್ ಅಧ್ಯಕ್ಷ ಹುಲಿಮನೆ ರಾಮಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೇ ಇತರರು ಉಪಸ್ಥಿತರಿದ್ದರು.


ಮದೆ ಬಿಜಿಎಸ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಪುನೀತರವರು ಸಂಸ್ಥೆಯ ವಾರ್ಷಿಕ ವರದಿ ಮಂಡನೆ ಮಾಡಿದರು. ಶಾಲೆಯ ವಿದ್ಯಾರ್ಥಿಗಳ ಪಾಲಕರಿಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಪಾಲಕರಿಗೆ ಗಣ್ಯರಿಂದ ಬಹುಮಾನವನ್ನು ವಿತರಣೆ ನಡೆಯಿತು.


ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮದೆ ಮಹೇಶ್ವರ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖ ಹುದೇರಿ ರಾಜೇಂದ್ರನವರು ಉದ್ಘಾಟನೆ ಮಾಡಿ, ವಿದ್ಯಾಸಂಸ್ಥೆಯನ್ನು ಗ್ರಾಮಸ್ಥರು ಸೇರಿ ಕಟ್ಟಿದ ಹಿಂದಿನ ದಿನಗಳನ್ನು ಮೆಲುಕು ಹಾಕಿದರು. ನಿವೃತ್ತ ಪ್ರಾಂಶುಪಾಲ ಬಿ.ಅರ್.ಜೋಯಪ್ಪನವರು ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮದೆ ಮಹೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯನ್ನು ತಿಳಿಸಿದರು.


ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್.ಕೆ.ಜಿ ಹಿಂದ ಎಂಟನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ನೆರೆದಿದ್ದ ಸಬೀಕರ ಮನಸೂರೆಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net