ಹೆಗಲತ್ತಿ ನಾಗಯಕ್ಷೆ ಸನ್ನಿಧಿಯಲ್ಲಿ ವಾರ್ಷಿಕೋತ್ಸವ

temple
ಹೆಗಲತ್ತಿ ನಾಗಯಕ್ಷೆ ಕ್ಷೇತ್ರದ ವಾರ್ಷಿಕೋತ್ಸವದ ಬಗ್ಗೆ ಗಜೇಂದ್ರ ಮಾಳೋದೆ ಮಾಹಿತಿ ನೀಡಿದರು. ಪ್ರಭಾಕರ್, ಕಿರಣ್, ಶಂಕರ್ ಗನ್ನಿ, ಮಹೇಶ್ ಮುಂತಾದವರಿದ್ದರು.
Published on

ಶಿವಮೊಗ್ಗ: ಮಂಡಗದ್ದೆ ಸಮೀಪದ ಹೆಗಲತ್ತಿಯ ನಾಗಯಕ್ಷೆ ಸನ್ನಿಧಿಯಲ್ಲಿ ಫೆ.21ರಿಂದ 25ರವರೆಗೆ 9ನೇ ವಾರ್ಷಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸನ್ನಿಧಿಯ ಭಕ್ತ ಗಜೇಂದ್ರ ಮಾಳೋದೆ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 21ರ ಬೆಳಗ್ಗೆ ಗ್ರಾಮ ದೇವರಾದ ಕಂಬದ ನರಸಿಂಹ ಸ್ವಾಮಿಗೆ ಹೂವು ಹಣ್ಣಿನ ಸೇವೆ, 22ರಂದು ವಿಶೇಷ ಪೂಜೆ, ಗಣಪತಿ ಹೋಮ, ನಾಗದೇವತಾ ಮೂಲಮಂತ್ರ ಹವನ ನೆರವೇರಲಿದೆ. 24ರಂದು ಬೆಳಗ್ಗೆ 9ಕ್ಕೆ ಸುಮಾರು 9ಕ್ಕೂ ಹೆಚ್ಚು ಪಲ್ಲಕ್ಕಿ ದೇವರುಗಳ ಆರಾಧನೆ ಇದೆ ಎಂದರು.
ಶಿವಮೊಗ್ಗ ಬಾವಸಾರ ಕ್ಷತ್ರಿಯ ಸಮಾಜದ ತುಳಜಾ ಭವಾನಿ ದೇವಾಲಯ ಹಾಗೂ ಗ್ರಾಮದ ಭಕ್ತರಿಂದ ಮೆರವಣಿಗೆ ನಡೆಯಲಿದೆ. ಬಂಗಾರಮಕ್ಕಿ ಕ್ಷೇತ್ರದ ಧರ್ಮದರ್ಶಿ ಮಾರುತಿ ಗುರೂಜಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಭಕ್ತರಾದ ಶಂಕರ್ ಗನ್ನಿ, ಪ್ರಭಾಕರ್, ಮಹೇಶ್, ಸಂತೋಷ ಸಾಕ್ರೆ, ಕಿರಣ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net