ಸ್ಪರ್ಧೆ ಹೆಚ್ಚಾದರೆ ಸಾಧನೆಗೆ ಸಹಕಾರಿ: ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಭಿಮತ

Anniversary in Adarsh School Mandya
Published on

ಮಂಡ್ಯ: ದೇಶದಲ್ಲಿ ಆಹಾರ ಕೊರತೆ ಎದುರಾದಾಗ ಹಸಿರು ಕ್ರಾಂತಿ ನಡೆಯಿತು. ಪರಿಣಾಮ ಕೃಷಿಯಿಂದಲೇ ದೇಶದ ಜನತೆಗೆ ಅನ್ನ ನೀಡಲು ಸಾಧ್ಯವಾಯಿತು. ಅದರಂತೆ ಪ್ರಸ್ತುತ ಶಿಕ್ಷಣದಿಂದಲೇ ಕ್ರಾಂತಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ನಗರದ ಅಧ್ಯಯನ ವಿದ್ಯಾಟ್ರಸ್ಟ್‌ನ ಆದರ್ಶ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಕಲಿಕಾ ವಾತಾವರಣ ಸೃಷ್ಟಿಸಿದರೆ ಸಾಧನೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಪ್ರಸ್ತುತ ಎಲ್ಲ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಅದರಲ್ಲೂ ವಿದ್ಯಾರ್ಥಿಗಳ ನಡುವೆ ಸ್ಪರ್ಧೆ ಇದ್ದರೆ ಹೆಚ್ಚು ಸಾಧನೆಗೆ ಸಹಕಾರಿಯಾಗಲಿದೆ. ಸಾಧನೆ ಮಾಡಲು ನಿರಂತರ ಶ್ರಮ, ಬದ್ಧತೆ, ಪ್ರಾಮಾಣಿಕತೆ, ಕಠಿಣ ಶ್ರದ್ಧೆ, ಸಂಯಮ, ತಾಳ್ಮೆ ಇರಬೇಕು. ಆಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಪ್ರತಿ ವಿದ್ಯಾರ್ಥಿಗಳಲ್ಲೂ ಒಂದೊಂದು ರೀತಿಯ ಪ್ರತಿಭೆ ಇದೆ. ಅದೇ ರೀತಿ ಬೇರೆ ಬೇರೆ ಆಲೋಚನೆಗಳಿವೆ. ಒಂದೇ ಕ್ಷೇತ್ರದಲ್ಲಿ ಎಲ್ಲರೂ ಸಾಧನೆ ಮಾಡಲು ಸಾಧ್ಯವಿಲ್ಲ. ತಮ್ಮ ಪ್ರತಿಭೆಗನುಗುಣವಾಗಿ ಸಾಧನೆ ಮಾಡಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಮಾತನಾಡಿದರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ.ಮೂರ್ತಿ, ಬೆಂಗಳೂರಿನ ನಾಗಾರ್ಜುನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮನೋಹರ್, ಸ್‌ಟಾ ಸ್ಕಿಲ್ ಟ್ರೈನರ್ ರಮೇಶ್, ನಗರಸಭಾ ಸದಸ್ಯೆ ಶಶಿಕಲಾ ಪ್ರಕಾಶ್, ಹರೀಶ್ ಇತರರಿದ್ದರು. ಇದೇ ವೇಳೆ ಪಠ್ಯೇತರ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net