ಶ್ರೀ ಕುರಂಭ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಸಂಪನ್ನ

08sunti01
Published on
  • ಕೊಡಗು : ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಕಳೆದ 58 ವರ್ಷಗಳಿಂದ ನೆಲೆಗೊಂಡಿರುವ ಕೊಡಂಗಲ್ಲೂರ್ ಶ್ರೀ ಕುರಂಭ (ಭಗವತಿ) ದೇವಸ್ಥಾನದಲ್ಲಿ ಶನಿವಾರ ವಿಶೇಷ ವಾರ್ಷಿಕ ಮಹಾಪೂಜೋತ್ಸವ ಹಾಗೂ ಬೆಳ್ಳಾಟಂ ಹಾಗೂ ಭಾನುವಾರ ಹರಕೆ ಅರ್ಪಣೆಗಳನ್ನು ಭಕ್ತಾಧಿಗಳು ಶ್ರದ್ಧಾಭಕ್ತಿಯಿಂದ ಸಮರ್ಪಿಸುವುದರೊಂದಿಗೆ ದೇವಾಲಯದ ವಾರ್ಷಿಕೋತ್ಸವ ಸಂಪನ್ನಗೊಂಡಿತು.

  • ದೇವರ ಉತ್ಸವದ ಅಂಗವಾಗಿ ಶನಿವಾರ ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮದೊಂದಿಗೆ ಆರಂಭಗೊಂಡು, ಸಂಜೆ 6.30 ಗಂಟೆಗೆ ಗಣಪತಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವರಪೂಜೆ, 7 ಗಂಟೆಗೆ ಮುತ್ತಪ್ಪ ದೇವರಿಗೆ ಪೈಂಗುತ್ತಿ, 7.30 ಗಂಟೆಗೆ ಚಾಮುಂಡೇಶ್ವರಿ ದೇವಿಗೆ ಪೂಜೆ, 7.45 ಗಂಟೆಗೆ ಗುಳಿಗನ ಪೂಜೆ, 8 ಗಂಟೆಗೆ ಭದ್ರಕಾಳಿ ದೇವಿಗೆ ಅರ್ಚನೆ ನೈವೇದ್ಯ ಪೂಜೆ, 8.30 ಗಂಟೆಗೆ ದೇವಿ ದರ್ಶನ, 8.45ಕ್ಕೆ ತಲಪುರಿ ಸ್ನಾನ ಮೆರವಣಿಗೆಯಲ್ಲಿ ಮಕ್ಕಳು ಹಣತೆ ಹಿಡಿದು ಸಾಗಿದರು. ನಂತರ ವಸೂರಿ ಮಾಲೆ ದೇವರ ಬೆಳ್ಳಾಟಂ ನಡೆಯಿತು. ರಾತ್ರಿ 9.30 ರಿಂದ 11 ಗಂಟೆಯವರೆಗೆ ದೇವಿ ದರ್ಶನ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

  • ಭಾನುವಾರ ಬೆಳಗ್ಗೆ 9 ಗಂಟೆಗೆ ದೇವಿಯ ದರ್ಶನ, ದೇವಿಗೆ ಹರಕೆಯ ನಂತರ ದೇವಿಗೆ ಅರ್ಪಣೆ ನೆರವೇರಿತು. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು. ನೆರೆದಿದ್ದ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಾಡಿಸಲಾಗಿತ್ತು.
    ಸುಂಟಿಕೊಪ್ಪ, ಶ್ರೀದೇವಿ, ಹರದೂರು, ನಾಕೂರು, ಕಂಬಿಬಾಣೆ, ಮತ್ತಿಕಾಡು, ಕೇರಳ ರಾಜ್ಯದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ದೇವಾಲಯದ ಮುಖ್ಯಸ್ಥರಾದ ಪಿ.ಆರ್.ಶಾಂತ ರಾಮಕೃಷ್ಣ, ಪಿ.ಆರ್.ಸುಕುಮಾರ್, ಸುನಿಲ್ ಕುಮಾರ್ ಸೇರಿದಂತೆ ಇತರರು ಇದ್ದರು.

ಚಿತ್ರ.1: ವಸೂರಿ ಮಾಲೆ ದೇವರ ಬೆಳ್ಳಾಟಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net