ಎನ್.ಆರ್.ಪುರದಲ್ಲಿ ವರ್ಷಧಾರೆ ಸಂಭ್ರಮ

6 nrp 1.
ಎನ್.ಆರ್.ಪುರ ಮುಖ್ಯ ರಸ್ತೆಯಲ್ಲಿ ಮಳೆ ಸುರಿಯುತ್ತಿರುವುದು.
Published on

ಎನ್.ಆರ್.ಪುರ: ಪಟ್ಟಣ ಹಾಗೂ ಸುತ್ತಮುತ್ತ ಶನಿವಾರ ಉತ್ತಮ ಮಳೆಯಾಗಿದೆ. ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿತ್ತು. ಸಂಜೆ 4 ಗಂಟೆ ಆರಂಭವಾದ ಮಳೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿಯಿತು. ಪಟ್ಟಣದಲ್ಲಿ ಶನಿವಾರ ಸಂತೆ ದಿನವಾಗಿದ್ದರಿಂದ ಸಂತೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಮಳೆಯಿಂದ ತೊಂದರೆ ಅನುಭವಿಸುವಂತಾಯಿತು. ತಾಲೂಕು ವ್ಯಾಪ್ತಿಯಲ್ಲಿ ಮೂರ‌್ನಾಲ್ಕು ದಿನಗಳಿಂದ ಮೋಡಕವಿದ ವಾತಾವರಣ ಇರುವುದರಿಂದ ಅಡಕೆ ಒಣಗಿಸಲು ಬೆಳೆಗಾರರು ಸಾಹಸ ಪಡುವಂತಾಗಿದೆ. ಈಗಾಗಲೇ ಕಟಾವು ಮಾಡಿ ಸಂಸ್ಕರಿಸಿರುವ ಅಡಕೆ ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net