ಅಣ್ಣಿಗೇರಿ ತಾಲೂಕು ಬರಪೀಡಿತ ಘೊಷಿಸಿ

29-ANG-1 PROTEST
Published on

ಅಣ್ಣಿಗೇರಿ: ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೊಷಿಸಿ ರೈತರಿಗೆ ಬೆಳೆ ಹಾನಿ ಹಾಗೂ ಬೆಳೆ ವಿಮೆ ನೀಡಬೇಕು ಎಂದು ಒತ್ತಾಯಿಸಿ ನಿರಂತರ ಹೋರಾಟ ಪಕ್ಷಾತೀತ ರೈತ ಸಂಘ ಹಾಗೂ ರೈತ ಹೋರಾಟ ಸಮಿತಿ ವತಿಯಿಂದ ಮಂಗಳವಾರ ರಸ್ತೆ ಸಂಚಾರ ತಡೆ ನಡೆಸಲಾಯಿತು. ಬಳಿಕ ತಹಸೀಲ್ದಾರ್ ಶಿವಾನಂದ ಹೆಬ್ಬಳ್ಳಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.

ಮುಂಗಾರು ಮಳೆ ಸಕಾಲಕ್ಕೆ ಬಾರದೇ ಹೆಸರು, ಶೇಂಗಾ, ಉಳ್ಳಾಗಡ್ಡಿ, ಮೆಣಸಿನಕಾಯಿ, ಬೆಳ್ಳುಳ್ಳಿ, ಹವೀಜ, ಗೋವಿನಜೋಳ ಬಿತ್ತನೆ ಮಾಡಿಲ್ಲ. ಅಲ್ಪಸ್ವಲ್ಪ ಧೈರ್ಯ ಮಾಡಿ ಬಿತ್ತಿದ ಫಸಲು ಮಳೆ ಇಲ್ಲದೆ ಬಿರುಬಿಸಿಲಿಗೆ ಒಣಗಿ ಹಾನಿಗೀಡಾಗುತ್ತಿವೆ. ಹೀಗಾಗಿ ಅಣ್ಣಿಗೇರಿ ತಾಲೂಕನ್ನು ಬರಗಾಲ ಪ್ರದೇಶವೆಂದು ಘೊಷಿಸಬೇಕು. ಈ ಭಾಗದ ಕೂಲಿಕಾರರಿಗೆ ಉದ್ಯೋಗ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಣ್ಣಿಗೇರಿಯು ಪ್ರಸಿದ್ಧ ಹತ್ತಿ ವ್ಯಾಪಾರ ಹಾಗೂ ಉತ್ತಮ ಎಪಿಎಂಸಿ ಹೊಂದಿದೆ. ಇದನ್ನು ಗಮನಿಸಬೇಕು ಎಸ್​ವಿ (63) ಗದಗ-ಹುಬ್ಬಳ್ಳಿ ಹೆದ್ದಾರಿಗೆ ಅಣ್ಣಿಗೇರಿ-ಮಜ್ಜಿಗುಡ್ಡ ಕ್ರಾಸ್​ಗೆ ಪ್ಲೇವರ್ ಅಳವಡಿಸಬೇಕೆಂಬ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ರಸ್ತೆ ಸಂಚಾರ ತಡೆಯಲಾಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಕಮಿಟಿ ಸದಸ್ಯ ಡಿ.ಎಚ್. ನವಲಗುಂದ, ಜಿಲ್ಲಾ ಕಮಿಟಿ ಸದಸ್ಯೆ ಮಹಾದೇವಿ ಹುಯಿಲಗೋಳ, ಬಸವರಾಜ ಶ್ಯಾನಭೋಗರ, ಭಗವಂತಪ್ಪ ಪುಟ್ಟಣ್ಣವರ, ಎ.ಪಿ. ಗುರಿಕಾರ, ಭರತೇಶ ಜೈನ, ನಿಂಗಪ್ಪ ಬಡ್ಡಪ್ನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net