ಬಿ. ಜಿ. ಅಣ್ಣಿಗೇರಿ ಪ್ರತಿಭಾ ಪ್ರತಿಷ್ಠಾನದಿಂದ ಪ್ರತಿಭಾ ಪುರಸ್ಕಾರ: ಅಧ್ಯಯನದಿಂದ ಪ್ರತಿಭೆ ಸಂಪಾದಿಸಿ: ಶಿವಾನಂದ ಕಟ್ಟಿ

07GDG05
Published on

ವಿಜಯವಾಣಿ ಸುದ್ದಿಜಾಲ ಗದಗ
ಪ್ರತಿಭೆ ಯಾರ ಸ್ವತ್ತೂ ಅಲ್ಲ, ಪ್ರತಿಭೆಗೆ ಜಾತಿ, ಧರ್ಮ, ಬಡವ ಶ್ರೀಮಂತ ಎಂಬುವದು ಇಲ್ಲ ಎಂದು ಗದುಗಿನ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಕಾರ್ಯದಶಿರ್ ಶಿವಾನಂದ ಕಟ್ಟಿ ಅಭಿಪ್ರಾಯಪಟ್ಟರು.
ಗದಗ ತಾಲೂಕಿನ ಕಣವಿ, ಮುಳಗುಂದದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸ್ಸೆಸಲ್ಸಿ ವಾಷಿರ್ಕ ಪರೀೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ 5 ವಿದ್ಯಾಥಿರ್, ವಿದ್ಯಾಥಿರ್ನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಪರಿಶ್ರಮದ ಅಧ್ಯಯನಶೀಲತೆಯಿಂದ ಪ್ರತಿಭೆಯನ್ನು ಸಂಪಾದಿಸಬಹುದು. ಅಂತಹ ಸಂಪಾದನೆ ನಿಮ್ಮದಾಗಲಿ ಎಂದು ಶಿವಾನಂದ ಕಟ್ಟಿ ಹೇಳಿದರು.
ಪ್ರತಿಷ್ಠಾನ ಸದಸ್ಯ ಬಸವರಾಜ ಬಿಂಗಿ ಮಾತನಾಡಿ ಗದಗ ಪರಿಸರದ ಶಿಣ ೇತ್ರಕ್ಕೆ ಬಿ.ಜಿ.ಅಣ್ಣಿಗೇರಿ ಗುರುಗಳ ಸೇವೆ ಬಹು ದೊಡ್ಡದು. ನಿಸ್ವಾರ್ಥದಿಂದ ವಿದ್ಯಾಥಿರ್ಗಳಿಗೆ ತಮ್ಮ ಗುರುಕುಲ ಆಶ್ರಮದ ಮೂಲಕ ಉಚಿತ ಪಾಠ ಮಾಡಿದ ಮಹಾತ್ಮರು. ಅವರ ಶಿಷ್ಯಂದಿರು ಇಂದು ಈಗ ಉನ್ನತ ಹುದ್ದೆಯಲ್ಲಿದ್ದಾರೆ. ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಲ ನಿಶ್ಚಿತ. ಹಾಗೆಯೇ ನೀವೂ ಕಷ್ಟಪಟ್ಟು ಓದಿ ಎಂದು ತಿಳಿಸಿದರು.
ಪ್ರತಿಭಾ ಪ್ರತಿಷ್ಠಾನದ ಅಧ್ಯ ಶಿವಕುಮಾರ ಪಾಟೀಲ ಮಾತನಾಡಿ, ಪ್ರತಿಭಾನ್ವಿತ ಮಕ್ಕಳಿಗೆ ಅಣ್ಣಿಗೇರಿ ಗುರುಗಳು ಪುರಸ್ಕರಿಸಿ ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದರು. ಗುರುಗಳು ಹಾಕಿಕೊಟ್ಟ ಪರಂಪರೆಯನ್ನು ಪ್ರತಿಷ್ಠಾನವು ಮುಂದುವರೆಸಿದೆ. ವಿದ್ಯಾಥಿರ್ ವಿದ್ಯಾಥಿರ್ನಿಯರು ಇದರ ಸದುಪಯೋಗ ಪಡೆಯಬೇಕೆಂದರು.
ನೇಹಾ ಖಟವಟೆ, ಜಿ.ನಿರ್ಮಲಾ, ಸಿದ್ದು ಕವಲೂರ, ಜಿ.ಎಂ.ಫಿರಂಗಿ, ಉಮೇಶ ಬೆಂತೂರ, ಮಲ್ಲಪ್ಪ ದೋನ್​, ಎಸ್​.ಜಿ.ಅಣ್ಣಿಗೇರಿ, ಕಳಕಪ್ಪ ಕುರ್ತಕೋಟಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net