

ಅಣ್ಣಿಗೇರಿ: ಇಲ್ಲಿಯ ದಾಸೋಹ ಮಠದ 61ನೇ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ಅಡ್ಡಪಲ್ಲಕಿ ಉತ್ಸವ ಸಂಭ್ರಮದಿಂದ ನಡೆಯಿತು.
ಮೆರವಣಿಗೆಯುದ್ದಕ್ಕೂ ಭಕ್ತರು ಶ್ರೀ ಸಿದ್ಧಾರೂಢ, ಶ್ರೀ ಗುರುನಾಥರೂಢ, ರುದ್ರಮನಿ ಶ್ರೀ ಶಂಕರೇಂದ್ರ ಮಹಾರಾಜಕೀ ಜೈ ಎಂದು ಜಯಘೊಷ ಹಾಕಿದರು. ಪಲ್ಲಕ್ಕಿಯಲ್ಲಿ ಕುಳಿತ ಡಾ. ಶಿವಕುಮಾರ ಶ್ರೀಗಳು ಭಕ್ತರಿಗೆ ಆಶೀರ್ವಾದ ನೀಡಿದರು.
ಪಲ್ಲಕ್ಕಿ ಉತ್ಸವ ಅಣ್ಣಿಗೇರಿ ದಾಸೋಹ ಮಠದಿಂದ ಪ್ರಾರಂಭವಾಗಿ ಮಾರ್ಕೆಟ್ ರಸ್ತೆ, ಅಗಸಿ ಓಣಿ ಮೂಲಕ ಸಂಚರಿಸಿ ಜಾಡಗೆರೆ ಓಣಿಯಲ್ಲಿ ಸಂಪನ್ನವಾಯಿತು. ನಂತರ ಜಾಡಗೇರೆ ಓಣಿಯಲ್ಲಿ ಭಕ್ತರಿಗೆ ಅನ್ನಸಂತರ್ಪಣಿ ಕಾರ್ಯಕ್ರಮ ನೆರವೇರಿತು. ಸಂಜೆ ಮರಳಿ ಶ್ರೀಮಠಕ್ಕೆ ಆಗಮಿಸಿತು. ನಂತರ ಶ್ರೀ ರಾಜಯೋಗಿ ತೋಟಪ್ಪ ದೇಸಾಯಿ ಅವರ ವೇದಿಕೆಯಲ್ಲಿ ಕಾರ್ಯಕ್ರಮ ನೆರವೇರಿತು.
ದಾಸೋಹ ಮಠದ ಅಧ್ಯಕ್ಷ ರಾಜೇಶ್ವರರಾವ್ ದೇಸಾಯಿ, ಉಪಾಧ್ಯಕ್ಷ ಷಣ್ಮುಖ ಗುರಿಕಾರ, 61 ಜಾತ್ರಾ ಮಹೋತ್ಸವದ ಅಧ್ಯಕ್ಷ ಮಾಹಾದೇವಪ್ಪ ದಿಡ್ಡಿ, ಉಪಾಧ್ಯಕ್ಷ ಅಭಿಷೇಕ ಅಮಡ್ಲ, ಶಿವಯೋಗಿ ಬ ಸುರಕೋಡ, ಚಂದ್ರು ಕರಡಿ, ರಾಜು ಎಣ್ಣಿ, ನಿಜಗುಣಪ್ಪ ಅಕ್ಕಿ, ನಿಂಗಪ್ಪ ದಳವಾಯಿ, ಮಂಜುನಾಥ ಮಾಯಣ್ಣವರ, ಬಾಬುರಾವ್ ಗಾಯಕ್ವಾಡ, ಮಹಾಬಲೇಶ್ವರ ಹೆಬಸೂರ, ಬಸವರಾಜ ಯಳವತ್ತಿ, ಷಣ್ಮುಖ ತೋಟಾಕಾವ, ವಿ.ವಿ. ಬೆಂತೂರ, ಶಿವಾನಂದ ಹಾಳದೋಟರ, ದಾವಲಸಾಬ ದರವಾನ, ಈಶಣ್ಣಾ ಹೊಂಬಳ ಇದ್ದರು.