ಅಣ್ಣಿಗೇರಿ ದಾಸೋಹ ಮಠದ ಜಾತ್ರೆ

11 annigeri
Published on

ಅಣ್ಣಿಗೇರಿ: ಪಟ್ಟಣದ ರುದ್ರಮನಿ ಮಹಾಸ್ವಾಮಿಗಳ 60ನೇ ಜಾತ್ರಾ ಮಹೋತ್ಸವ, ವಾರ್ಷಿಕ ಪುಣ್ಯ ಸ್ಮರಣೋತ್ಸವ, ಪಲ್ಲಕ್ಕಿ ಉತ್ಸವ, ಮಹಾರಥೋತ್ಸದ ಹಾಗೂ ಶಿವನಾಮ ಸಪ್ತಾಹದ ಕಾರ್ಯಕ್ರಮಗಳು ಜ.12ರಿಂದ ಜ.18 ರವರೆಗೆ ಆಯೋಜಿಸಲಾಗಿದೆ ಎಂದು ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಸಂಜೆ 6 ಗಂಟೆಗೆ ರಾಜಯೋಗಿ ತೋಟಪ್ಪ ದೇಸಾಯಿ ಅವರ ವೇದಿಕೆಯಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಮೊದಲ ದಿನ ಮಾತೃ ದೇವೋಭವ ಎಂಬ ವಿಷಯದ ಕುರಿತು ಪ್ರವಚನ ಆರಂಭವಾಗಲಿದ್ದು, ನಾಡಿನ ವಿವಿಧ ಭಾಗಗಳಿಂದ ಸಂತ ಮಹಾತ್ಮರು ಆಗಮಿಸಿ ಪ್ರವಚನ ನೀಡಲಿದ್ದಾರೆ ಎಂದರು.

ದಾಸೋಹ ಮಠದ ನಿರಂತರ ಸೇವಾ ಟ್ರಸ್ಟ್ ಅಧ್ಯಕ್ಷ ರಾಜೇಶ್ವರರಾವ್ ದೇಸಾಯಿ, ಷಣ್ಮುಖ ಗುರಿಕಾರ, ಶರಣಬಸಪ್ಪ ದೇಶಮುಖ, ಶ್ರೀಕುಮಾರ ಸಿಕ್ಕೇದೇಸಾಯಿ, ದ್ಯಾಮಣ್ಣ ಕೊಗ್ಗಿ, ಪುರಸಭೆ ಅಧ್ಯಕ್ಷೆ ಮೆಹಬೂಬಿ ನವಲಗುಂದ, ವಿ.ವಿ. ಬೆಂತೂರ, ಮಹೇಶ್ವರ ಅಂಗಡಿ, ಮಹಾಬಳೇಶ್ವರ ಹೆಬಸೂರ, ನಿಂಗಪ್ಪ ಬಡ್ಡೆಪ್ಪನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net