

ಹುಬ್ಬಳ್ಳಿ: ಸುಮಾರು ಅರ್ಧ ಶತಮಾನದಿಂದ ನಿರಾಶ್ರಿತರಾಗಿರುವ ಧಾರವಾಡ ಜಿಲ್ಲೆ ಅಣ್ಣಿಗೇರಿಯ 110 ಆದಿವಾಸಿ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಹಾಗೂ ಮನೆಗಳನ್ನು ಮಂಜೂರು ಮಾಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾಟಿರ್ ಆ್ ಇಂಡಿಯಾ (ಎಸ್ಡಿಪಿಐ) ಪ್ರಧಾನ ಕಾರ್ಯದಶಿರ್ ಅಫ್ಸರ್ ಕೊಡ್ಲಿಪೇಟ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನದ ಹಿಂದೆ ಎಸ್ಡಿಪಿಐ ನಿಯೋಗ ಅಣ್ಣಿಗೇರಿಗೆ ತೆರಳಿ ಆದಿವಾಸಿಗಳ ಸ್ಥಿತಿಗತಿ ತಿಳಿದುಕೊಂಡು ಬಂದಿದೆ. ತಮಗೆ ಆಗುತ್ತಿರುವ ಅನ್ಯಾಯ, ಕಿರುಕುಳವನ್ನು ಎಳೆಎಳೆಯಾಗಿ ಅವರು ಬಿಡಿಸಿ ಇಟ್ಟಿದ್ದಾರೆ. ಅವರಿಗೆ ಸರ್ಕಾರದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಅವರ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಎಂದು ದೂರಿದರು.
ರಾಜಕೀಯ ಕಾರಣಕ್ಕಾಗಿ ಇವರನ್ನು ಮುಖ್ಯವಾಹಿನಿಯಿಂದ ದೂರ ಇಡಲಾಗಿದೆ. ಇವರಿಗಾಗಿ ಜಾಗ ಮೀಸಲಿದೆ. ಆ ಜಾಗದಲ್ಲಿ ದಂಡ ಕಟ್ಟಿಯಾದರೂ ಹಕ್ಕು ಪತ್ರ ಪಡೆದುಕೊಳ್ಳಲು ಸಿದ್ಧರಿದ್ದಾರೆ. ಅಂತಹ ಯಾವುದೇ ಅವಕಾಶವನ್ನು ಸರ್ಕಾರ ಇವರಿಗೆ ನೀಡುತ್ತಿಲ್ಲ.
ಇವರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಒಂದು ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವರಿಗೆ ಹಕ್ಕು ಪತ್ರ ನೀಡಬೇಕು. ಇಲ್ಲದಿದ್ದರೆ ಆದಿವಾಸಿಗಳೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೈಭೀಮ ಅಖಿಲ ಭಾರತ ದಲಿತ ಹೋರಾಟ ಸಮಿತಿ ಅಧ್ಯಕ್ಷ ಧರ್ಮರಾಜು ಹರಣಿಶಿಕಾರಿ ಮಾತನಾಡಿ, ಬ್ರಿಟಿಷರೊಂದಿಗೆ ಸ್ವಾತಂತ್ರ್ಯಕ್ಕಾಗಿ ಕಾದಾಡಿದ ನಮಗೆ ಇಂದು ತಲೆ ಮೇಲೆ ಸೂರು ಇಲ್ಲ. ನಮಗೆ ರೇಶನ್ ಕಾರ್ಡ್ ಇಲ್ಲ, ಬದುಕು ದುರ್ಬರವಾಗಿದೆ ಎಂದು ಅಳಲು ತೋಡಿಕೊಂಡರು.
ಪಕ್ಷದ ಮುಖಂಡರಾದ ಡಾ. ವಿಜಯ ಗುಂಟ್ರಾಳ, ಬಸಣ್ಣ ಹರಣಿಶಿಕಾರಿ, ಮುಕ್ತುಂ ಹುಸೇನ್ ಹೊಸಮನಿ, ಗಫೂರ್ ಅಹ್ಮದ ಕುರಟ್ಟಿ ಇದ್ದರು.