ಡಾ.ಅನ್ನಿ ಬೆಸೆಂಟ್ ಅವರ ಜನ್ಮ ದಿನಾಚರಣೆ

mng-4oct-annie besent
Published on



ಮಂಗಳೂರು : ಮಂಗಳೂರು ಥಿಯೋಸಾಫಿಕಲ್ ಸೊಸೈಟಿಯ ಬೆಸೆಂಟ್ ಮಂದಿರದಲ್ಲಿ ಡಾ. ಅನ್ನಿ ಬೆಸೆಂಟ್ ಅವರ 178ನೇ ಜನ್ಮ ದಿನ ಆಚರಿಸಲಾಯಿತು. ಶ್ರೀ ಶಾರದಾ ಶಂಕರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಚಿತ್ರ ಪ್ರಭು ಅವರು ಡಾ. ಅನ್ನಿ ಬೆಸೆಂಟ್ ಅವರ ಜೀವನ ಸಾಧನೆಯ ಬಗ್ಗೆ ಮಾತನಾಡಿದರು. ನಿವೃತ್ತ ಉಪನ್ಯಾಸಕಿ ಡಾ.ಮೀನಾಕ್ಷಿ ರಾಮಚಂದ್ರ ಅವರು ದಾಸ ಸಾಹಿತ್ಯದ ಬಗ್ಗೆ ಹಾಗೂ ಬೆಂಗಳೂರಿನ ಪುಟ್ಟಮ್ಮ ಅವರು ಜ್ಯೋತಿ ಪೂಜೆ ಅನುಷ್ಠಾನದ ಬಗ್ಗೆ ಉಪನ್ಯಾಸ ನೀಡಿದರು. ವಿದ್ವಾಂಸ ಡಾ.ಪ್ರಭಾಕರ ಜೋಷಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸೊಸೈಟಿ ಅಧ್ಯಕ್ಷ ವಿದ್ವಾನ್ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಕೆ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಕೃಷ್ಣಾನಂದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net