ಅಣ್ಣಾಸಾಬ ಅಧ್ಯಕ್ಷ, ಶಿವಗೌಡ ಉಪಾಧ್ಯಕ್ಷ

10
ಜುಗೂಳ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷ, ಅಣ್ಣಾಸಾಬ ಪಾಟೀಲ, ಉಪಾಧ್ಯಕ್ಷ ಶಿವಗೌಡ ಪಾಟೀಲ ಅವರನ್ನು ಸನ್ಮನಿಸಲಾಯಿತು. ಸದಸ್ಯರಾದ ಬಾಬಗೌಡ ಪಾಟೀಲ, ಚಿದಾನಂದ ಮಿಣಚೆ, ಆದಿನಾಥ ಮಗದುಮ್, ಶಿವಾನಂದ ಕಡೋಲೆ ಇತರರಿದ್ದರು.
Published on

ಕಾಗವಾಡ: ತಾಲೂಕಿನ ಜುಗೂಳ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಅಣ್ಣಾಸಾಬ ಪಾಟೀಲ, ಉಪಾಧ್ಯಕ್ಷರಾಗಿ ಶಿವಗೌಡ ಪಾಟೀಲ ಅವಿರೋಧ ಆಯ್ಕೆಯಾದರು ಎಂದು ಸಹಾಯಕ ಚುನಾವಣಾಧಿಕಾರಿ ಅಣ್ಣಪ್ಪ ಸವದಿ ಘೋಷಿಸಿದರು.

ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ನೂತನ ಸದಸ್ಯರಾದ ಬಾಬಗೌಡ ಪಾಟೀಲ, ಚಿದಾನಂದ ಮಿಣಚೆ, ಆದಿನಾಥ ಮಗದುಮ್, ಶಿವಾನಂದ ಕಡೋಲೆ, ಮಾಲತಿ ಸುರೇಶ ಪಾಟೀಲ, ಸೇವಂತಿ ವಿಶ್ವನಾಥ ಶಮನೇವಾಡಿ, ಕುಸುಮಾ ಜಯಪಾಲ ಯಮಕನಮರಡಿ, ಮಹ್ಮದರಫೀಕ್ ಮುಜಾವರ, ಮಚ್ಚಿಂದ್ರ ಘಸ್ತೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ಬೇಡಕಿಹಾಳೆ ಸಂಘದ ಸಿಬ್ಬಂದಿ, ಗ್ರಾಮದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net