ಅಶ್ವಾರೂಢಾ ಗೌರಿಯಾದ ಅನ್ನಪೂರ್ಣೇಶ್ವರಿ

kls horanadu-1
ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿದಿಯಲ್ಲಿ ನಡೆದ ಶ್ರೀ ವಾಗೀಶ್ವರಿ ಮೂಲಮಂತ್ರ ಹೋಮದ ಪೂರ್ಣಾಹುತಿಯನ್ನು ಡಾ. ಜಿ.ಭೀಮೇಶ್ವರ ಜೋಷಿ ದಂಪತಿ ನೆರವೇರಿಸಿದರು.
Published on

ಳಸ: ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿ ಅಶ್ವಾರೂಢಾ ಗೌರಿಯಾಗಿ ಕಂಗೊಳಿಸಿದಳು.

ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಶ್ರೀ ವಾಗೀಶ್ವರಿ ಮೂಲಮಂತ್ರ ಹೋಮ ಮತ್ತು ಶ್ರೀ ಶಾರದಾ ಪೂಜೆ ನೆರವೇರಿತು. ಹೋಮದ ಪೂರ್ಣಾಹುತಿಯಲ್ಲಿ ದೇವಸ್ಥಾನದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಪಾಲ್ಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಶ್ವೇತಾ ಪ್ರಭು ಅವರಿಂದ ಭಕ್ತಿ ಸಂಗೀತ, ಸಂಜೆ ಅಲಸೆ ಶ್ರೀ ಚಂಡಿಕೇಶ್ವರಿ ಸೇವಾ ಟ್ರಸ್ಟ್‌ನಿಂದ ತಾರಕಾಸುರ ವಧೆ ಯಕ್ಷಗಾನ ನಡೆಯಿತು. ಅ.10ರಂದು ವೃಷಭಾರೂಢಾ ತ್ರಿಮೂರ್ತಿ ಅಲಂಕಾರ ಪೂಜೆ, ಶ್ರೀ ದುರ್ಗಾ ಮೂಲಮಂತ್ರ ಹೋಮ, ಬೆಳಗ್ಗೆ ಸುಗಮ ಸಂಗೀತ, ಸಂಜೆ ಭರತನಾಟ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net