

ನರಗುಂದ: ಇಲ್ಲಿಯ ಪುರಸಭೆಯ ನೂತನ ಅಧ್ಯಕ್ಷರಾಗಿ ಅನ್ನಪೂರ್ಣಾ ಸಿದ್ದಪ್ಪ ಯಲಿಗಾರ ಹಾಗೂ ಉಪಾಧ್ಯಕ್ಷರಾಗಿ ಕಾಶವ್ವ ಬಸಪ್ಪ ಮಳಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಶಾಸಕ ಸಿ.ಸಿ. ಪಾಟೀಲ, ಸಂಸದ ಪಿ.ಸಿ. ಗದ್ದಿಗೌಡ್ರ, ಪುರಸಭೆ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಿಹಿಹಂಚಿ ಹೂ ಮಾಲೆ ಹಾಕಿ ಸತ್ಕರಿಸಿದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ವರಿಷ್ಠರ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ 8ನೇ ವಾರ್ಡ್‌ನಿಂದ ಅನ್ನಪೂರ್ಣಾ ಯಲಿಗಾರ, ಉಪಾಧ್ಯಕ್ಷ ಸ್ಥಾನಕ್ಕೆ 20ನೇ ವಾರ್ಡ್‌ನ ಕಾಶವ್ವ ಮಳಗಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಆಯ್ಕೆ ಅವಿರೋಧವಾಗಿದೆ ಎಂದು ಚುನಾವಣೆ ಅಧಿಕಾರಿ ಶ್ರೀಶೈಲ ಘೋಷಿಸಿದರು. ಬಿಜೆಪಿ ಬೆಂಬಲಿತ 17 ಪುರಸಭೆ ಸದಸ್ಯರು ಹಾಜರಿದ್ದರು.
ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಸದಸ್ಯರಾದ ರೇಣುಕಾ ಕಲ್ಲಾರಿ. ರಾಜೇಶ್ವರಿ ಹವಾಲ್ದಾರ, ಭಾವನಾ ಪಾಟೀಲ, ರಜೀಯಾಬೇಗಂ ತಹಶೀಲ್ದಾರ್, ಸುನೀಲ ಕುಷ್ಟಗಿ, ಎ.ಎಂ. ಹುಡೇದ, ಸಂಭಾಜಿ ಕಾಶೀದ, ಶಿವಾನಂದ ಮುತವಾಡ. ಕಿರಣ ಮುಧೋಳೆ, ಎಸ್.ಆರ್. ಪಾಟೀಲ, ಸಿದ್ದಪ್ಪ ಯಲಿಗಾರ, ಬಸವರಾಜ ಯಲಿಗಾರ, ಅನೀಲ ಧರೆಯಣ್ಣವರ, ಪ್ರಕಾಶ ಹಾದಿಮನಿ, ದೇವಣ್ಣ ಕಲಾಲ, ಪ್ರಶಾಂತ ಜೋಶಿ, ಬಸು ಪಾಟೀಲ, ಶೇಖಪ್ಪ ಯಲಿಗಾರ ಉಪಸ್ಥಿತರಿದ್ದರು.