ಪಾದಯಾತ್ರಿಕರಿಗೆ ಅನ್ನಪ್ರಸಾದ ಸೇವೆ

Annaprasada service, Tikota, Danammadevi, Amoghasiddha deva, Babanagar, Kalkhavatagi,
ತಿಕೋಟಾ ಪಟ್ಟಣದ ದರಿದೇವರ ಕಾಲನಿಯಲ್ಲಿ ಗುಡಾಪುರ ದಾನಮ್ಮದೇವಿ, ಅರಕೇರಿ ಅಮೋಘಸಿದ್ಧ ದೇವರಿಗೆ ಹೋಗುವ ಪಾದಯಾತ್ರಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಸಾಹೇಬಗೌಡ ಕೆಂಪವಾಡ, ಸೋಮಲಿಂಗ ಶಿರಹಟ್ಟಿ, ರಮೇಶ ತುಳಜನವರ, ಶಿವಾನಂದ ಬಿರಾದಾರ ಇತರರಿದ್ದರು.
Published on

ತಿಕೋಟಾ: ಪಟ್ಟಣದ ದರಿದೇವರ ಕಾಲನಿಯಲ್ಲಿ ಗುಡಾಪುರ ದಾನಮ್ಮದೇವಿ ಹಾಗೂ ಅರಕೇರಿ ಅಮೋಘಸಿದ್ಧ ದೇವರಿಗೆ ಹೋಗುವ ಪಾದಯಾತ್ರಿಕರಿಗೆ ಶನಿವಾರ, ಭಾನುವಾರ ಅನ್ನಪ್ರಸಾದ ಸೇವೆ ನಡೆಯಿತು.

ಎರಡು ದಿನ ಅಂದಾಜು ಹತ್ತು ಸಾವಿರ ಭಕ್ತರು ಪ್ರಸಾದ ಸ್ವೀಕರಿಸಿದರು. ಬೆಳಗ್ಗೆ ಶೀರಾ, ಉಪ್ಪಿಟ್ಟು, ಚೂಡಾ, ಬಾಳೆಕಾಯಿ, ಚಹಾ ಹಾಗೂ ಮಧ್ಯಾಹ್ನ- ರಾತಿ ಹಾಲುಗ್ಗಿ, ಅನ್ನ ಸಾಂಬರ್ ವ್ಯವಸ್ಥೆ ಮಾಡಲಾಗಿತ್ತು.

ಶನಿವಾರ ರಾತ್ರಿ ಬಾಬಾನಗರ, ಕಳ್ಳಕವಟಗಿ, ತಿಕೋಟಾ ತಂಡಗಳಿಂದ ಡೊಳ್ಳಿನ ಪದಗಳು ನಡೆದವು. ಗ್ರಾಪಂ ಮಾಜಿ ಅಧ್ಯಕ್ಷ ಸಾಹೇಬಗೌಡ ಕೆಂಪವಾಡ, ರಮೇಶ ತುಳಜನವರ, ಶಿವಾನಂದ ಬಿರಾದಾರ, ಗ್ರಾಪಂ ಮಾಜಿ ಸದಸ್ಯ ಸೋಮಲಿಂಗ ಶಿರಹಟ್ಟಿ, ಮುತ್ತು ಶಿರಹಟ್ಟಿ, ಸತೀಶ ಶಿರಹಟ್ಟಿ, ರಾಮು ಮಾಳಿ, ರಾಜು ಚೌಧರಿ, ಬಸು ಅವಟಿ ಹಾಗೂ ಕಮಿಟಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net