ಅಣ್ಣಪ್ಪ ಅಧ್ಯಕ್ಷ, ಚಂದ್ರಕಾಂತ ಉಪಾಧ್ಯಕ್ಷ

19Athanigramin1
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಭಾನುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಅಣ್ಣಪ್ಪ ಚವ್ಹಾಣ, ಉಪಾಧ್ಯಕ್ಷರಾಗಿ ಚಂದ್ರಕಾಂತ ಮಾಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ಎನ್.ನೂಲಿ ಘೋಷಿಸಿದರು.

ಅಧ್ಯಕ್ಷ ಅಣ್ಣಪ್ಪ ಚವ್ಹಾಣ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಸಹಕಾರದಿಂದ ಸಂಘದ ಸದಸ್ಯರ ಏಳಿಗೆಗಾಗಿ ಹೆಚ್ಚಿನ ಅನುದಾನ ತಂದು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ನಿರ್ದೇಶಕರನ್ನು ಗ್ರಾಮದ ಮುಖಂಡರು ಸತ್ಕರಿಸಿದರು.

ನಿರ್ದೇಶಕರಾದ ಮಂಜುನಾಥ ಅಂಬಾಜಿ, ಲಕ್ಷ್ಮಣ ಕರಜಗಿ, ನಾರಾಯಣ ಅಂಬಾಜಿ, ಭೀಮಪ್ಪ ಆಸಂಗಿ, ಸುವರ್ಣಾ ಕಾಶಿದ, ಪ್ರೇಮಾ ನಾಯಿಕ, ಪ್ರೇಮಾ ಅವಟಿ, ಸತ್ಯಪ್ಪ ಸವದಿ, ಮಾರುತಿ ಮಾದರ, ನಾಗಪ್ಪ ನಾಯಿಕ, ಡಿಸಿಸಿ ಬ್ಯಾಂಕ್ ನಿರೀಕ್ಷಕ ಚೇತನಕುಮಾರ ದಳವಾಯಿ, ಮುಖ್ಯಕಾರ್ಯನಿರ್ವಾಹಕ ಮಲ್ಲಪ್ಪ ಕಾಶೀದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net