ದೇವನಹಳ್ಳಿಯಲ್ಲಿ ಅಣ್ಣಮ್ಮದೇವಿ ಉತ್ಸವ

15 07 2025_BGR_RURAL-PAGE_2
ಶ್ರೀ ಅಣ್ಣಮ್ಮದೇವಿ&ದೊಡ್ಡಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಎಲ್ಲ ದೇವತೆಗಳ ಆಗಮನದಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಬಯಪ ಮಾಜಿ ಅಧ್ಯಕ್ಷ ಅಶ್ವತ್ಥ ನಾರಾಯಣ್​, ಪುರಸಭಾ ಅಧ್ಯಕ್ಷ ಡಿ.ಎಂ.ಮುನಿಕೃಷ್ಣ, ಉಪಾಧ್ಯಕ್ಷ ಜಿ.ಎ.ರವೀಂದ್ರ, ಸ್ಥಾಯಿ ಸಮಿತಿ ಅಧ್ಯೆ ಕೋಮಲ ನಟರಾಜ್​ ಇತರರು ಇದ್ದರು.
Published on

ದೇವನಹಳ್ಳಿ : ಪಟ್ಟಣದ ದೇಶದಪೇಟೆ ಶ್ರೀ ಅಣ್ಣಮ್ಮದೇವಿ, ಶ್ರೀ ದೊಡ್ಡಮ್ಮದೇವಿ ಸೇವಾ ಸಮಿತಿಯಿಂದ ಶ್ರೀ ಅಣ್ಣಮ್ಮದೇವಿ, ಶ್ರೀ ಚೌಡೇಶ್ವರಿದೇವಿ, ಕೋಟೆ ಮಾರಮ್ಮದೇವಿ, ದೊಡ್ಡಮ್ಮದೇವಿ, ಶ್ರೀ ಕಾಳಮ್ಮದೇವಿ, ಮದ್ದೂರಮ್ಮದೇವಿ, ಗಂಗಮ್ಮದೇವಿ ಹಾಗೂ ಮುನೇಶ್ವರಸ್ವಾಮಿ 27ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಸಲಾಗುತ್ತಿದೆ ಎಂದು ಸಮಿತಿ ಸಂಚಾಲಕ ಪುರಸಭಾ ಉಪಾಧ್ಯಕ್ಷ ಜಿ.ಎ.ರವೀಂದ್ರ ತಿಳಿಸಿದರು.

ಪಟ್ಟಣದ ಹಳೇ ಬಸ್​ ನಿಲ್ದಾಣದಲ್ಲಿ ಸಮಿತಿ ಸದಸ್ಯರು ಬೆಂಗಳೂರು ನಗರ ದೇವತೆ ಅಣ್ಣಮ್ಮ ದೇವಿ ಸೇರಿ ಎಲ್ಲ ದೇವತೆಗಳನ್ನು ಪೂರ್ಣಕುಂಭ ಕಳಸ ವಾದ್ಯತಂಡಗಳೊಂದಿಗೆ ಸ್ವಾಗತಿಸಿ ಮಾತನಾಡಿದರು. ಹಳೇ ಪುರಸಭಾ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಿ ಜು.18 ರಿಂದ 23ರವರೆಗೆ 6 ದಿನಗಳ ಕಾಲ ವಿಜೃಂಭಣೆಯಿಂದ ಜಾತ್ರೆ ನೆರವೇರಿಸಲಾಗುವುದು ಎಂಧರು.

ಮಂಗಳವಾರ ಆರತಿದೀಪಗಳು, ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯಿತು. ಜು.16 ರಂದು ಬೆಳಗ್ಗೆ ಹಾಗೂ ಸಂಜೆ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿನಿಯೋಗ, ಸಂಜೆ 7.30ಕ್ಕೆ ತುಮಕೂರಿನ ತಂಡದಿಂದ ವಾದ್ಯಗೋಷ್ಠಿ ಕಾರ್ಯಕ್ರಮ, ಜು.17ರಂದು ಬೆಳಗ್ಗೆ 10ಕ್ಕೆ ಪಟ್ಟಣದ ರಾಜಬೀದಿಗಳಲ್ಲಿ ಮೊಬೈಲ್​ ವಾದ್ಯಗೋಷ್ಠಿ ಹಾಗೂ ಜನಪದ ವಾದ್ಯಗಳ ಸಮ್ಮುಖದಲ್ಲಿ ಎಲ್ಲ ದೇವತೆಗಳ ಮೆರವಣಿಗೆ, ಸಂಜೆ ವಿಶೇಷ ಪೂಜೆ, ಜು.18 ರಂದು ಬೆಳಗ್ಗೆ 10ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 7ಕ್ಕೆ ಜೂನಿಯರ್​ ಂಟಸಾಲ ತಂಡದಿಂದ ಅನ್ನಮಯ್ಯ ಕೀರ್ತನೆಗಳ ಗಾಯನ, ಜು.19ರಂದು ಬೆಳಗ್ಗೆ 10 ಗಂಟೆಗೆ ಎಲ್ಲ ದೇವತೆಗಳಿಗೆ ವಿಶೇಷ ಅಲಂಕಾರ ಪೂಜೆ ಪ್ರಸಾದ ವಿನಿಯೋಗ ನಂತರ ಬೀಳ್ಕೊಡುಗೆ ಏರ್ಪಡಿಸಲಾಗಿದೆ.

ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಜಗನ್ನಾಥ, ಲ್ಮನಾರಾಯಣ್​, ಅಣ್ಣಮ್ಮ ದೇವಿ ಉತ್ಸವ ಸಮಿತಿ ಅಧ್ಯಕ್ಷ ಮುನಿನಂಜಪ್ಪ, ಮಾಜಿ ಸದಸ್ಯರಾದ ಸೊಸೈಟಿ ಕುಮಾರ್​, ರವಿಕುಮಾರ್​, ಕಾಳಪ್ಪನವರ ವೆಂಕಟೇಶ್​, ಶಶಿಕುಮಾರ್​ ಪಂಡು ನಾರಾಯಣಸ್ವಾಮಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ.ಮುನಿರಾಜು ಅಪ್ಪಯ್ಯ, ಬೇಕರಿ ಮಂಜುನಾಥ್​, ಪ್ರಕಾಶ್​, ಗಜೇಂದ್ರ, ಡಿ.ಆ.ವೆಂಕಟೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net