

ಮಡಿಕೇರಿ:
ಕುಶಾಲನಗರದಲ್ಲಿರುವ ವಿದ್ಯಾರ್ಥಿನಿಯರ ಬಿಸಿಎಂ ಹಾಸ್ಟೆಲ್‌ನಿಂದ ಸಿಬ್ಬಂದಿಯೇ ಆಹಾರ ಸಾಮಾಗ್ರಿಗಳನ್ನು ಕದ್ದೊಯ್ದಿರುವುದರ ಬಗ್ಗೆ ಸಾಕ್ಷಿ ಸಮೇತ ವಿದ್ಯಾರ್ಥಿಗಳು ದೂರು ನೀಡಿದ್ದರೂ ಸಂಬAಧಿಸಿದವರು ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ಬಿ.ಡಿ. ಅಣ್ಣಯ್ಯ ಆರೋಪಿಸಿದ್ದಾರೆ.
ಹಾಸ್ಟೆಲ್‌ಗೆ ಸರ್ಕಾರ ನೀಡುತ್ತಿರುವ ಆಹಾರ ಸಾಮಾಗ್ರಿಗಳನ್ನು ಇಲ್ಲಿನ ಸಿಬ್ಬಂದಿ ಒಂದು ಹಾಸ್ಟೆಲ್‌ನಿಂದ ಕದ್ದೊಯ್ದು ಮತ್ತೊಂದು ಹಾಸ್ಟೆಲ್ ಗ್ರಂಥಾಲಯದ ಶೌಚಾಯದಲ್ಲಿಟ್ಟಿದ್ದಾರೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಛಾಯಾಚಿತ್ರ ಸಹಿತ ಕಳ್ಳತನ ಪ್ರಕರಣವನ್ನು ಬಹಿರಂಗ ಪಡಿಸಿದ್ದಾರೆ.
ಈ ವಿಚಾರವನ್ನು ನಾವುಗಳು ಪೊಲೀಸರಿಗೆ ತಿಳಿಸಿ ಸ್ಥಳಕ್ಕೆ ಭೇಟಿ ನೀಡಿ ಸಂಬAಧಿಸಿದ ತಾಲೂಕು ಬಿಸಿಎಂ ಅಧಿಕಾರಿಗೆ ಕರೆ ಮಾಡಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಂತೆ ಒತ್ತಾಯಿಸಿದ್ದರೂ ಅವರು ಯಾವುದೋ ನೆಪ ಹೇಳಿ ಸ್ಥಳಕ್ಕೆ ಬಂದಿಲ್ಲ. ನಂತರ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿಗೆ ದೂರು ನೀಡಿ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ಕೊಡಲಾಗಿದೆ. ಸಂಬAಧಿಸಿದವರ ವಿರುದ್ಧ ಒಂದು ವಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಾಸ್ಟೆಲ್‌ನಲ್ಲಿ ನಿತ್ಯ ಆಹಾರ ಸಾಮಾಗ್ರಿಗಳು ಕಳ್ಳತನವಾಗುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ. ವಿದ್ಯಾರ್ಥಿಗಳ ಹಿತ ಕಾಯಲು ಮತ್ತು ಸರ್ಕಾರದ ಸೌಲಭ್ಯ ದುರುಪಯೋಗವಾಗುವುದನ್ನು ತಡೆಯಲು ಬಿಸಿಎಂ ಇಲಾಖೆ ಕುಶಾಲನಗರ ತಾಲೂಕು ಅಧಿಕಾರಿ ಮತ್ತು ಹಾಸ್ಟೆಲ್ ಸಿಬ್ಬಂದಿಯನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ಭೀಮಾ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಎಲ್.ಎಂ. ನಾಗರಾಜ, ಸಾಮಾಜಿಕ ಹೋರಾಟಗಾರ ಕೆ.ಪಿ. ಸೋಮಣ್ಣ ಸುದ್ದಿಗೋಷ್ಠಿಯಲ್ಲಿ ಇದ್ದರು.