ಬಾಡಗಂಡಿಯಲ್ಲಿ ಅನ್ನದಾತ ಸಹಕಾರಿ ಸಂಘ ಆರಂಭ

Annadata Co-operative Society started in Badagandi
ಬೀಳಗಿ ಸಮೀಪದ ಬಾಡಗಂಡಿಯಲ್ಲಿ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಅನ್ನದಾತ ಸಹಕಾರಿ ಸಂಘದ ನೂತನ ಶಾಖೆಯನ್ನು ಎಂ.ಪಿ. ಪಾಟೀಲ ಉದ್ಘಾಟಿಸಿದರು. ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ, ದಯಾನಂದ ಪಾಟೀಲ ಇದ್ದರು.
Published on

ಬೀಳಗಿ: ಗ್ರಾಮೀಣ ಭಾಗದ ಜನಸಾಮಾನ್ಯರ ಅಪೇಕ್ಷೆಯಂತೆ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಅನ್ನದಾತ ಸಹಕಾರಿ ಸಂಘ ಪ್ರತಿವರ್ಷ ತನ್ನದೇ ಆದ ಸೇವೆ ಮಾಡುತ್ತ ಬಂದಿದ್ದು, ಸದ್ಯ ಬಾಡಗಂಡಿ ಗ್ರಾಮದಲ್ಲಿ ಅದರ ನೂತನ ಶಾಖೆ ಆರಂಭಿಸಲಾಗಿದೆ ಎಂದು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ. ಎನ್. ಪಾಟೀಲ ಹೇಳಿದರು.

ಸಮೀಪದ ಬಾಡಗಂಡಿಯಲ್ಲಿ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಅನ್ನದಾತ ಸಹಕಾರಿ ಸಂಘದ ನೂತನ ಶಾಖೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯು ಶಿಕ್ಷಣ, ಸಹಕಾರಿ ಕ್ಷೇತ್ರ, ಅನ್ನದಾತ ಕೇಂದ್ರ, ಅನ್ನದ ಸೂಪರ್ ಮಾರ್ಕೆಟ್, ಸ್ವಾಮಿ ವಿವೇಕಾನಂದ ಸಹಕಾರಿ ಪತ್ತಿನ ಸಂಘ ಉತ್ತರ ಕರ್ನಾಟಕದಲ್ಲಿ ತನ್ನ 17ನೇ ಶಾಖೆ ಹೊಂದಿದೆ. ಈ ಭಾಗದ ಜನರ ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕ ವೃಂದ, ಬ್ಯಾಂಕ್ ಸಿಬ್ಬಂದಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಗ್ರಾಹಕರ ಮತ್ತು ಠೇವುದಾರರ ಸಹಕಾರದಿಂದ ಸಂಘವು ಪ್ರಗತಿ ಪಥದಲ್ಲಿ ಸಾಗಿದೆ ಎಂದರು.

ಬಾಡಗಂಡಿಯ ಹಿರಿಯ ಎಂ.ಪಿ. ಪಾಟೀಲ ಅನ್ನದಾತ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟಿಸಿದರು. ಸಂಸ್ಥೆ ನಿರ್ದೇಶಕರಾದ ದಯಾನಂದ ಪಾಟೀಲ, ಕಲ್ಮಠದ ಶಿವಾನಂದ ಹಿರೇಮಠ, ಮಲ್ಲಪ್ಪ ಮೇಟಿ, ಶರಣಪ್ಪ ಆಗ್ನಿ, ಆರ್.ಜಿ.ಪಾಟೀಲ, ವೀರೇಂದ್ರ ಪಾಟೀಲ, ಭೋಜು ದೇವೂರ, ಸ್ವಾಮಿ ವಿವೇಕಾನಂದ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರವೀಣ ಕಡಕೋಳ, ವಿ.ಆರ್. ಹಿರೇನಿಂಗಪ್ಪನ್ನವರ, ರಮೇಶ ಹುಗ್ಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net