ಡಾ.ರಾಜ್‌ಕುಮಾರ್ ಜನ್ಮದಿನ: ಸಿಲ್ವರ್‌ಜ್ಯೂಬಿಲಿ ಉದ್ಯಾನದಲ್ಲಿ ಅನ್ನದಾಸೋಹ

Annadasoha at Silver Jubilee Park Mandya
Published on

ಮಂಡ್ಯ: ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ನಗರದ ಸಿಲ್ವರ್‌ಜ್ಯೂಬಿಲಿ ಉದ್ಯಾನದಲ್ಲಿ ಅನ್ನದಾಸೋಹ ಆಯೋಜಿಸಲಾಗಿತ್ತು.

ಸಂಘದ ಅಧ್ಯಕ್ಷ ಕೆ.ಸಿ.ರವೀಂದ್ರ ಮಾತನಾಡಿ, ಡಾ.ರಾಜ್‌ಕುಮಾರ್ ಅವರಿಗೆ ಭಾರತರತ್ನ ಪುರಸ್ಕಾರ ನೀಡಬೇಕೆಂದು ಕೇಂದ್ರ ಮತ್ತು ರಾಜ್ಯಸರ್ಕಾರಕ್ಕೆ ಹಿಂದಿನಿಂದಲೂ ಮನವಿ ಮಾಡುತ್ತಿದ್ದೇವೆ. ಈ ಬಗ್ಗೆ ಗಮನಹರಿಸಬೇಕೆಂದು ಒತ್ತಾಯಿಸಿದರು.

ಅಭಿಮಾನಿಗಳಾದ ಪ್ರವೀಣ್‌ಕುಮಾರ್, ಸುರೇಶ್‌ಬಾಬು, ನಗರಸಭೆ ಮಾಜಿ ಸದಸ್ಯ ಆನಂದ್, ವೆಂಕಟೇಶ್, ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net