

ವೆಂಕಟೇಶ ಗುಡೆಪ್ಪನವರ ಮುಧೋಳ
ಕಳೆದ ಮೂರು ದಿನಗಳಿಂದ ನಡೆದ ಕವಿಚಕ್ರವರ್ತಿ ರನ್ನ ವೈಭವದಲ್ಲಿ ರನ್ನ ಕ್ರೀಡಾಂಗಣ, ರನ್ನ ಭವನ, ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾಹಿತ್ಯ, ಸಾಂಸ್ಕೃತಿಕ, ಕ್ರೀಡಾ ಹಾಗೂ ಮನರಂಜನೆಯ ಸಮಾರಂಭಗಳಿಗೆ ಆಗಮಿಸಿದ ಸುಮಾರು 82 ಸಾವಿರ ಜನರಿಗೆ ಸಿಹಿ ಊಟವನ್ನು ಮಾಡಿಸಿ ಜನಮನದಲ್ಲಿ ಉಳಿದರು ಬಂಡಿಗಣಿಯ ಅನ್ನದಾನೇಶ್ವರ ಮಹಾಸ್ವಾಮಿಗಳು.
ಫೆ.23, 24ರಂದು ಹುಗ್ಗಿ, ಮಾದಲಿ, ಬುಂದೆ ಹಾಗೂ ವಿವಿಧ ಖಾದ್ಯಗಳೊಂದಿಗೆ ಅನ್ನ ಸಾಂಬಾರನ್ನು ಮಠದ ಸುಮಾರು 400 ಭಕ್ತರು ಹಗಲು-ರಾತ್ರಿ ಎನ್ನದೆ ಅನ್ನದಾಸೋಹ ಮಾಡಿದರು.
ಶಿಸ್ತಿನ ಶಿಪಾಯಿಗಳು : ಮಠದ ಭಕ್ತರು ರನ್ನ ವೈಭವಕ್ಕೆ ಬಂದಿದ್ದ ಯಾವ ಜನರನ್ನೂ ಮರಳಿ ಕಳಿಸಿದೆ ಶಿಸ್ತಿನಿಂದ ಕರಿದು ಕುಳಿತುಕೊಳ್ಳುಲು ಹೇಳಿ ಊಟ ಬಡಸಿದ್ದು ಎಲ್ಲರ ಗಮನ ಸೆಳೆಯಿತು. ಜನರು ಮಠದ ಭಕ್ತರನ್ನು ಕೊಂಡಾಡಿದರು. ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಊಟ ಮಾಡಿಸಿದ್ದಲ್ಲೆ ಪೊಲೀಸರಿಗೆ ವಿಶೇಷವಾಗಿ ಭೋಜನ ಬಡಿಸಿದ್ದು ಕಂಡು ಬಂದಿತು.
ಸಾಲಿನಲ್ಲಿ ಬಂದ ಸಚಿವರು: ಊಟದ ಸ್ಥಳಕ್ಕೆ ಬಂದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ತಮ್ಮ ಜತೆಗೆ ಇರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಾಲಿನಲ್ಲಿ ನಿಂತು ಮಾದಲಿ, ಅನ್ನ ಸಾಂಬರ ಹಾಕಿಸಿಕೊಂಡು ಊಟ ಮಾಡಿದರು. ಎಸ್.ಪಿ. ಅಮರನಾಥ ರೆಡ್ಡಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಇತರರಿದ್ದರು.