ಸಂಭ್ರಮದ ಅನ್ನದಾನೇಶ್ವರ ಮಹಾರಥೋತ್ಸವ

14 NRL-4
Published on

ನರೇಗಲ್ಲ: ಸಮೀಪದ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಮಹಾರಥೋತ್ಸವ ಭಾನುವಾರ ಸಹಸ್ರಾರು ಭಕ್ತರ ಸಮೂಹದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು.
ಹಾಲಕೆರೆಯ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ 10 ಗಂಟೆಗೆ ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿಗಳ ಜಂಗಮೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
ಸಂಜೆ 6 ಗಂಟೆಗೆ ಶ್ರೀ ಅನ್ನದಾನೇಶ್ವರ ಮಹಾರಥೋತ್ಸವಕ್ಕೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಚಾಲನೆ ನೀಡಿದರು. ದರೂರ ಸಂಗನಬಸವೇಶ್ವರ ಮಠದ ಕೊಟ್ಟುರು ಸ್ವಾಮೀಜಿ, ನಾಗಲಾಪುರದ ನಿರಂಜನ ದೇಶಿಕರು, ಸೋಮಸಮುದ್ರದ ಸಿದ್ಧಲಿಂಗ ದೇಶಿಕರು, ಯಡ್ರಾಮಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಶ್ರೀಧರ ಮುರಡಿ, ಮರಿಕೊಟ್ಟೂರು ದೇಶಿಕರು, ಬೂದಗುಂಪ ಸಿದ್ಧೇಶ್ವರ ದೇಶಿಕರು, ಅಡ್ನೀರ ವಿಶ್ವೇಶ್ವರ ದೇಶಿಕರು, ಹಿರೇಮಠದ ಬಸವಲಿಂಗ ಸ್ವಾಮೀಜಿ, ಜಿಗೇರಿ ಹಿರೇಮಠದ ಗುರುಸಿದ್ಧ ಶಿವಾಚಾರ್ಯರು, ಕುರಗೋಡದ ಪರ್ವತದೇವರು, ಸೋಮಸಮುದ್ರದ ನಾಗನಾಥ ದೇವರು, ಗದಗ ಚಂದ್ರಶೇಖರ ದೇವರು, ಸಿದ್ದಣ್ಣ ಬಂಡಿ ಸೇರಿದಂತೆ ಸುತ್ತಲಿನ ಗ್ರಾಮದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಜನಾ ಮಂಡಳಿ, ಡೊಳ್ಳು ಸೇರಿದಂತೆ ಸಕಲ ವಾದ್ಯವೈಭವಗಳೊಂದಿಗೆ ಭಾಗವಿಸಿದ್ದರು. ಇಟಗಿ ಗ್ರಾಮದ ತೇರಿನ ಹಗ್ಗವನ್ನು ಮೆರವಣಿಗೆ ಮೂಲಕ ತಂದರು, ಹೊಸಳ್ಳಿ ಸದ್ಭಕ್ತರು ನಂದಿಕೀಲು ಸೇವೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net