

ಮುನವಳ್ಳಿ: ಚಾಮರಾಜ ನಗರದಲ್ಲಿ ಇತ್ತೀಚೆಗೆ ಜರುಗಿದ ಪ್ರಸಕ್ತ ಸಾಲಿನ ಶಾಲಾ ಶಿಣ ಇಲಾಖೆ, ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಜಂಪರೋಪ್ಸ್ ಪಂದ್ಯಾವಳಿಯಲ್ಲಿ ಪಟ್ಟಣದ ಶ್ರೀ ಅನ್ನದಾನೇಶ್ವರ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ತಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದೆ.
ಮಹಾವಿದ್ಯಾಲಯದ ರುದ್ರಪ್ಪ ಜಗದಾರ ಪ್ರೀಸ್ಟೆಲ್ನಲ್ಲಿ ಪ್ರಥಮ, ಆರತಿ ಲಮಾಣಿ ಡಬಲ್ ಅಂಡರ್ ಪಾಸ್ನಲ್ಲಿ ಪ್ರಥಮ, ಸ್ನೇಹಾ ಪಾಟೀಲ, ಕೀರ್ತಿ ಲಮಾಣಿ, ಸುವರ್ಣಾ ಲಮಾಣಿ, ಹೇಮಾವತಿ ಲಮಾಣಿ ಸಿಂಗಲ್ ಅಂಡರ್ಪಾಸ್ನಲ್ಲಿ ಕಾಲೇಜಿನ 6 ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟು 31 ಜಿಲ್ಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅನ್ನದಾನೇಶ್ವರ ಕಾಲೇಜು ವಿದ್ಯಾರ್ಥಿಗಳ ಸಾಧನೆಗೆ ಪದವಿಪೂರ್ವ ಶಿಣ ಇಲಾಖೆಯ ಉಪನಿರ್ದೇಶಕರು, ಸಂಸ್ಥೆಯ ಸಂಸ್ಥಾಪಕ ಅಧ್ಯ ಮುರುಂದ್ರ ಸ್ವಾಮೀಜಿಗಳು, ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರಾದ ಎಂ.ಎಚ್. ಪಾಟೀಲ, ಕೆ.ಬಿ. ನಲವಡೆ ಮತ್ತು ಕ್ರೀಡಾ ತರಬೇತಿದಾರರಾದ ಅಶೋಕ ಸಂಕಣ್ಣವರ, ದಾನು ಗದಗಿ,, ಪರುಶುರಾಮ ಕದಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.