

ಮುನವಳ್ಳಿ: ಪಟ್ಟಣದಲ್ಲಿ ಈಚೆಗೆ ಜರುಗಿದ ಪದವಿಪೂರ್ವ ಮಹಾವಿದ್ಯಾಲಯಗಳ ತಾಲೂಕುಮಟ್ಟದ ಕ್ರೀಡಾಕೂಟದ ಬಾಲಕರು ಹಾಗೂ ಬಾಲಕಿಯರ ವಿಭಾಗದಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆಯುವ ಮೂಲಕ ಮುರುಘರಾಜೇಂದ್ರ ಯೋಗವಿದ್ಯಾ ಕೇಂದ್ರ ಸಂಚಾಲಿತ ಅನ್ನದಾನೇಶ್ವರ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ ಸತತ 14ನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಬಾಚಿಕೊಂಡಿದೆ.
ಒಟ್ಟು 81 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ: ಕಬಡ್ಡಿ, ಥ್ರೋಬಾಲ್, ವಾಲಿಬಾಲ್, ಟೆನಿಕ್ವಾಯಿಟ್, 200 ಮೀ. ಓಟ, ಎತ್ತರ ಜಿಗಿತ, 3000 ಮೀ. ಓಟ ಜಂಪ್‌ರೋಪ್ ಪ್ರಥಮ ಸ್ಥಾನ, ಜಾವಲಿನ್ ಥ್ರೋ ದ್ವಿತೀಯ ಸ್ಥಾನ ಗಳಿಸಿದೆ. ಬಾಲಕಿಯರ ವಿಭಾಗದಲ್ಲಿ: ಖೋ ಖೋ, ಕಬಡ್ಡಿ, ಥ್ರೋಬಾಲ್, ಜಾವಲಿನ್ ಥ್ರೋ, 3000 ಮೀ. ಓಟ. ಗುಡ್ಡುಗಾಡು ಓಟ, 1500 ಮೀ. ತ್ರಿವಿಧ ಜಿಗಿತ, ಎತ್ತರ ಜಿಗಿತ, 4400 ರೀಲೇ ಓಟ, ಟೆನಿಕ್ವಾಯಿಟ್, ಜಂಪ್‌ರೋಪ್ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ಸಾಧನೆಗೆ ಮಹಾವಿದ್ಯಾಲಯದ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ, ಉಪಾಧ್ಯಕ್ಷ ಅರುಣಗೌಡ ಪಾಟೀಲ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಎಂ.ಎಚ್.ಪಾಟೀಲ, ಕೆ.ಬಿ.ನಲವಡೆ, ದೈಹಿಕ ಶಿಕ್ಷಣ ನಿರ್ದೇಶಕ ಅಶೋಕ ಸಂಕಣ್ಣವರ, ದಾನು ಗದಗಿನ, ಪರಶುರಾಮ ಕದಂ, ಉಸನ್ಯಾಸಕಿ ಮಂಜುಳಾ ಬಾಂಡೆಕರ ಇತರರು ಅಭಿನಂದಿಸಿದ್ದಾರೆ.