ಅನ್ನಭಾಗ್ಯ ನಗದು 24 ಕೋಟಿ ಬಾಕಿ

IMG-20240924-WA0017
Published on

ಶಿವಾನಂದ ಹಿರೇಮಠ, ಗದಗ
ರಾಜ್ಯ ಸರ್ಕಾರದ ಮಹತ್ವಕಾಂೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಸಿಂಹ ಸ್ಥಾನ ಅಲಂಕರಿಸಿರುವ ಅನ್ನಭಾಗ್ಯ ನಗದು ನೇರವರ್ಗಾವಣೆ ಯೋಜನೆ ಕುಂಠುತ್ತ ಸಾಗಿದೆ. ಜುಲೈ ಮತ್ತು ಆಗಸ್ಟ ತಿಂಗಳ ಅನ್ನಭಾಗ್ಯ ನೇರ ನಗದು ಸೆಪ್ಟೆಂಬರ್​ ತಿಂಗಳು ಮಕ್ತಾಯಗೊಳ್ಳುತ್ತಿದ್ದರೂ ಲಾನುಭವಿ ಖಾತೆಗೆ ಜಮೆ ಆಗಿಲ್ಲ. ಕಳೆದೆರೆಡೂ ತಿಂಗಳು ಸೇರಿ ಒಟ್ಟು 24 ಕೋಟಿ ಬಾಕಿ ಇದ್ದು ನಗದು ವರ್ಗಾವಣೆ ವಿಳಂಬವಾಗಿದೆ.
ಪ್ರತಿ ತಿಂಗಳು ಲಾನುಭವಿಗಳ ಖಾತೆಗೆ ಹಣ ಜಮೆ ಆಗದ ಹಿನ್ನೆಲೆ ಲಾನುಭವಿಳಲ್ಲಿ ಆತಂಕ ಮನೆ ಮಾಡಿದೆ. ತಿಂಗಳಾಂತ್ಯದಲ್ಲಿ ಬ್ಯಾಂಕ್​ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಬ್ಯಾಂಕ್​ ಖಾತೆ ಪರಿಶೀಲಿಸಿ ಸಪ್ಪೆ ಮುಖ ಮಾಡಿ ಮನೆಗೆ ಮರಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಹಣ ತಡವಾಗಿ ಖಾತೆಗೆ ಜಮೆ ಆಗುತ್ತಿರುವುದರಿಂದ ಯೋಜನೆಗಳು ಬಂದ್​ ಆಗುತ್ತವೆ ಎಂದು ಕಸಿವಿಸಿಗೆ ಒಳಗಾಗುತ್ತಿದ್ದಾರೆ.

ಅನ್ನಭಾಗ್ಯ ನಗದು 24 ಕೋಟಿ:
ಜಿಲ್ಲೆಯಲ್ಲಿ 2.54 ಲಕ್ಷ ಪಡೀತರ ಚೀಟಿದಾರರಿದ್ದಾರೆ. ಅದರಲ್ಲಿ 2.25 ಲಕ್ಷ ಅರ್ಹರಿದ್ದು, ಒಟ್ಟು 7.19 ಲಕ್ಷ ಜನರಿಗೆ ಅನ್ನಭಾಗ್ಯ ನಗದು ನೇರ ವರ್ಗಾವಣೆ ಆಗಬೇಕಿದೆ. ಜುಲೈ ಮತ್ತು ಆಗಸ್ಟ ತಿಂಗಳಲ್ಲಿ ತಲಾ 5 ಕೆಜಿಯ ಹಣ (5 ಕೆಜಿಗೆ 170ರೂ. ಪ್ರತಿ ತಿಂಗಳು) ಜಮೆ ಆಗಬೇಕು. ಜೂನ್​ ಅಂತ್ಯದಲ್ಲಿ ಕೊನೆಯದಾಗಿ ಜಮೆ ಆಗಿತ್ತು. ಈಗ ಎರಡೂ ತಿಂಗಳು ಸೇರಿ ಪ್ರತಿ ಅರ್ಹ ಲಾನುಭವಿಗೆ 340 ರೂ. ಖಾತಗೆ ಡಿಬಿಟಿ ಮೂಲಕ ಹಣ ಜಮೆ ಆಗಬೇಕು. ಅನ್ನಭಾಗ್ಯ ನಗದು ನೇರವರ್ಗಾವಣೆಗೆ ಜಿಲ್ಲೆಗೆ ಪ್ರತಿ ತಿಂಗಳು ಸರಾಸರಿ 12 ಕೋಟಿ ಅನುದಾನ ಅಗತ್ಯವಿದೆ. ಹಾಗಾಗಿ ಕಳೆದೆರಡೂ ತಿಂಗಳು ಸೇರಿ ಒಟ್ಟು 24 ಕೋಟಿ ಅನುದಾನ ಬಿಡುಗಡೆ ಆಗಬೇಕಿದೆ. ಜಿಲ್ಲೆಯ ಗದಗ ತಾಲೂಕಿನಲ್ಲಿ ಅತೀ ಹೆಚ್ಚು 2.28 ಲಕ್ಷ ಜನರು ಅರ್ಹರಿದ್ದು, ಶಿರಹಟ್ಟಿಯಲ್ಲಿ ಅತೀ ಕಡಿಮೆ 67128 ಜನ ಅರ್ಹ ಲಾನುಭಿಗಳಿದ್ದಾರೆ.

"ಅನ್ನಭಾಗ್ಯ' ಆಡಳಿತಾತ್ಮಕ ಸಮಸ್ಯೆ:
ಅನ್ನಭಾಗ್ಯ ನಗದು ವರ್ಗಾವಣೆಗೆ ಸಂಬಂಧಿಸಿದಂತೆ ಕಳೆದ 6 ತಿಂಗಳಿಂದ ಜಿಲ್ಲೆಯಲ್ಲಿ 7000 ಕ್ಕೂ ಅಧಿಕ ಪಡೀತರ ಚೀಟಿ ದಾರರು ನ್ಯಾಯಬೆಲೆ ಅಂಗಡಿಯಿಂದ ರೇಷನ್​ ಪಡೆದಿಲ್ಲ. ಸರ್ಕಾರದ ಆದೇಶದಂತೆ 7000 ಕಾರ್ಡಗಳನ್ನು ತಾತ್ಕಾಲಿಕವಾಗಿ ಅಮಾನತು ಇಡಲಾಗಿದೆ. ಈ ಪಡೀತರ ಚೀಟಿದಾರರಿಗೆ ಹಣ ವರ್ಗಾವಣೆ ಆಗುವುದಿಲ್ಲ.

ಅನ್ನಭಾಗ್ಯ ಪ್ರಕರಣ:
ಪ್ರಸಕ್ತ ಸಾಲಿನ ಏಪ್ರಿಲ್​ 2024ರಿಂದ ಈ ವರೆಗೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ 6 ಪ್ರಕರಣ ದಾಖಲಿಸಲಾಗಿದೆ. ಗದಗ ತಾಲೂಕಿನಲ್ಲಿ 3 ಪ್ರಕರಣ, ಮುಂಡರಗಿಯಲ್ಲಿ 2 ಹಾಗೂ ರೋಣದಲ್ಲಿ 1 ಪ್ರಕರಣ ದಾಖಲಿಸಿ ಒಟ್ಟು 5.82 ಲಕ್ಷ ಮೌಲ್ಯದ 171.30 ಕ್ವಿಂಟಾಲ್​ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. 9 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. 1 ಲಕ್ಷ ಮೌಲ್ಯದ ಎರಡಯ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎಲ್ಲ ಪ್ರಕರಣದಲ್ಲಿ ಕೇವಲ ಚಾಲಕರ ಮೇಲೆ ಪ್ರಕರಣ ದಾಖಲಿಸಿ ಮೂಲ ಅಕ್ಕಿ ಸಾಗಾಟಗಾರರ ಮೇಲೆ ಪ್ರಕರಣ ದಾಖಲಿಸದೇ ಇರವುದು ಅನುಮಾನಕ್ಕೆ ಕಾರಣವಾಗಿದೆ.

ಕೋಟ್​:
ಜೂನ್​ ವರೆಗೆ ಪಾವತಿ ಆಗಿದೆ. ಕೆಲವೇ ದಿನಗಳಲ್ಲಿ ಜುಲೈ ಮತ್ತು ಆಗಸ್ಟ ತಿಂಗಳ ನಗದು ಲಾನುಭವಿ ಖಾತೆಗೆ ಜಮೆ ಆಗಲಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲೂ ಚರ್ಚೆ ಆಗಿದೆ. ಕಳೆದ 6 ತಿಂಗಳಿಂದ ರೇಷನ್​ ಪಡೆಯದ ಕಾರ್ಡ್​ ಗಳನ್ನು ಅಮಾನತು ಮಾಡಿದ್ದರಿಂದ ಅಂತಹ ಖಾತೆಗೆ ಹಣ ಜಮೆ ಆಗುವುದಿಲ್ಲ.
ವಿನೋದ ಕುಮಾರ, ಆಹಾರ ಇಲಾಖೆ ಡಿಡಿ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net