

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಅಂಕ್ರಾಲು ಕಲ್ಮನೆ ಶ್ರೀ ಭ್ರಾಹ್ಮರಿ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಮಾ.24, 25ರಂದು ಜರುಗಲಿದೆ.
ಕುಡುಬಿ ಸಮುದಾಯದವರು ನಂಬಿಕೊಂಡು ಬಂದಿರುವ ದೇವಾಲಯ ಕಲ್ಮನೆ ಅಮ್ಮನವರ ಕ್ಷೇತ್ರ. ಇಲ್ಲಿ ಪ್ರತಿನಿತ್ಯ ಪೂಜೆ, ಕುಂಕುಮಾರ್ಚನೆ, ಮಂಗಳಾರತಿ ಸಂಕ್ರಮಣದಂದು ವಿಶೇಷ ಪೂಜೆ, ತೊಟ್ಟಿಲು ಸೇವೆ, ಸಂದರ್ಶನ, ಮಹಾಪೂಜೆ, ವಾಹನಪೂಜೆ, ತುಲಾಭಾರ, ಹೂವಿನ ಪೂಜೆ, ಅನ್ನಸಂತರ್ಪಣೆ ನೆರವೇರುತ್ತದೆ.
ಕ್ಷೇತ್ರ ವೈಶಿಷ್ಟೃ
ಶ್ರೀಕ್ಷೇತ್ರದಲ್ಲಿ ಯಾವುದೇ ಹರಕೆ ನೀಡಿದರೆ ಹಾಗೂ ವಿವಾಹ ಸಂಬಂಧ, ಮಕ್ಕಳ ಭಾಗ್ಯ, ಜಾಗದ ತಕರಾರು, ಶೈಕ್ಷಣಿಕ ಮುಂತಾದ ಕಷ್ಟಗಳನ್ನು ದೇವಿ ಈಡೇರಿಸುತ್ತಾಳೆ ಎಂಬುದು ನಂಬಿಕೆ. ಮಕ್ಕಳಾಗದವರು ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ಹೊತ್ತರೆ ಮಕ್ಕಳ ಭಾಗ್ಯ ದೊರೆತಾಗ ತೊಟ್ಟಿಲು ಸೇವೆ ನೀಡುತ್ತಾರೆ. ಈ ಸೇವೆ ವಿಶಿಷ್ಟವಾಗಿದ್ದು, ಬೇರೆ ಎಲ್ಲಿಯೂ ಈ ರೀತಿಯ ಹರಕೆ ಇಲ್ಲ.
ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಮತ್ತು ಶ್ರೀ ಭ್ರಾಹ್ಮರಿ ಯುವಕ ಮಂಡಲ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಅರ್ಚಕ ವೃಂದ ಮತ್ತು ಭಕ್ತರ ಸಹಕಾರದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಮಾ.24ರಂದು ಮಧ್ಯಾಹ್ನ ತೊಟ್ಟಿಲು ಸೇವೆ, ಮಹಾಪೂಜೆ, ಮಹಾಅನ್ನಸಂತರ್ಪಣೆ, ರಾತ್ರಿ ವಾರ್ಷಿಕ ಕೆಂಡೋತ್ಸವ ಮತ್ತು ಜಾತ್ರಾ ಮಹೋತ್ಸವ, ಮಹಾಅನ್ನಸಂತರ್ಪಣೆ, ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಹಟ್ಟಿಯಂಗಡಿ ಅವರಿಂದ ಯಕ್ಷಗಾನ ಬಯಲಾಟ, ಕೆಂಡೋತ್ಸವ. 25ರಂದು ಬೆಳಗ್ಗೆ 7ಕ್ಕೆ ತುಲಾಭಾರ, ಮಹಾಅನ್ನಸಂತರ್ಪಣೆ ಜರುಗಲಿದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.
ಈ ದೇವಸ್ಥಾನ ಕಾರಣೀಕ ಕ್ಷೇತ್ರವಾಗಿದ್ದು ನಂಬಿದವರ ಇಷ್ಟಾರ್ಥ ದೇವಿ ಈಡೇರಿಸುತ್ತಾಳೆ. ದೇವಸ್ಥಾನ ಅಭಿವೃದ್ಧಿ ಪಥದಲ್ಲಿದೆ. ಕ್ಷೇತ್ರವನ್ನು ನಂಬಿ ಊರ ಮತ್ತು ಪರವೂರ ಭಕ್ತರು ಆಗಮಿಸುತ್ತಿದ್ದಾರೆ. ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಭಕ್ತರ ಸಹಕಾರ ಅಗತ್ಯ. -ರಾಮ ನಾಯ್ಕ ಅಧ್ಯಕ್ಷ https://www.vijayavani.net/spirituality-with-education-faith-in-god https://www.vijayavani.net/world-tuberculosis-control-day-celebrated-in-udupi